ರೈಲ್ವೇ ಬಜೆಟ್ ಟೀಕಿಸಿದ ಜಯಲಲಿತಾ

೨೦೧೬-೧೭ನೇ ಸಾಲಿನ ರೈಲ್ವೇ ಬಜೆಟ್ ರಾಜ್ಯದ ನಿರೀಕ್ಷೆಗಳನ್ನು ಪೂರೈಸಲು ವಿಫಲವಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಗುರುವಾರ ಹೇಳಿದ್ದು,
ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ
ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ

ಚೆನ್ನೈ: ೨೦೧೬-೧೭ನೇ ಸಾಲಿನ  ರೈಲ್ವೇ ಬಜೆಟ್ ರಾಜ್ಯದ ನಿರೀಕ್ಷೆಗಳನ್ನು ಪೂರೈಸಲು ವಿಫಲವಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಗುರುವಾರ ಹೇಳಿದ್ದು, ಬಜೆಟ್ ನ ಕೆಲವು ಆಯಾಮಗಳನ್ನು ಸ್ವಾಗತಿಸಿದ್ದಾರೆ.

"ಇಡಿಯಾಗಿ ರೈಲ್ವೇ ಬಜೆಟ್ ತಮಿಳು ನಾಡು ಜನರ ನಿರೀಕ್ಷೆಗಳನ್ನು ಪೂರೈಸಲು ವಿಫಲವಾಗಿದೆ" ಎಂದು ಜಯಲಲಿತಾ ಹೇಳಿದ್ದಾರೆ.

ಚೆನ್ನೈನಲ್ಲಿ ರೈಲ್ವೇ ಆಟೊ ಹಬ್ ಸ್ಥಾಪನೆ, ದೆಹಲಿ ಚೆನ್ನೈ ನಡುವೆ ರೈಲು ಕಾರಿಡಾರ್ ಯೋಜನೆ ಮತ್ತು ನಾಗಪಟ್ಟಣಂ ಹಾಗೂ ವೇಲಂಕನ್ನಿ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆಗಳನ್ನು ಸ್ವಾಗತಿಸಿದ್ದಾರೆ.

ಆದರೆ ಕುಂದು ಕೊರತೆಗಳನ್ನು ನೀಗಿಸಲು ಅಂತರ್ಜಾಲಾದ ಮೊರೆ ಹೋಗಿರುವುದು ಹಿನ್ನಡೆ ಎಂದಿರುವ ಜಯಲಲಿತಾ, ಸಾಮಾನ್ಯ ಜನಕ್ಕೆ ಅಂತರ್ಜಾಲದ ಬಗ್ಗೆ ತಿಳಿದಿರಲು ಸಾಧ್ಯವಿಲ್ಲ ಮತ್ತು ಸ್ಮಾರ್ಟ್ ಫೋನ್ ಗಳನ್ನು ಹೊಂದಿರುವುದಿಲ್ಲ. ಆದುದರಿಂದ ಕುಂದು ಕೊರತೆಗಳ ವಿಚಾರಣೆಯನ್ನು ಕೇವಲ ಸಾಮಾಜಿಕ ಅಂತರ್ಜಾಲ ತಾಣಗಳಿಗೆ ಮೀಸಲಿಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com