
ಮುಂಬೈ: ನಿರಂತರವಾಗಿ ಕುಸಿಯುತ್ತಿದ್ದ ಮುಂಬೈ ಶೇರು ಮಾರುಕಟ್ಟೆಯ ರೈಲ್ವೇ ಬಜೆಟ್ ನ ಹಿನ್ನೆಲೆ ಸೆನ್ಸೆಕ್ಸ್ 39 ಅಂಕಗಳ ಏರಿಕೆಯನ್ನು ಕಂಡು 23,127.59 ಅಂಕಗಳ ಮಟ್ಟಕ್ಕೇರಿದೆ.
ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ಹಾಗೂ ರೈಲ್ವೇ ಬಜೆಟ್ ನಿಂದಾಗಿ ಹೂಡಿಕೆದಾರರು ಎಚ್ಚರಿಕೆಯಿಂದ ಹೂಡಿಕೆ ಮಾಡಿದ್ದಾರೆ.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 15.50 ಅಂಕಗಳ ಏರಿಕೆಯನ್ನು ದಾಖಲಿಸಿ 7,034.20 ಅಂಕಗಳ ಮಟ್ಟಕ್ಕೆ ಏರಿತು. ರೈಲ್ವೇ ಬಜೆಟ್ ಮಂಡನೆಗೆ ಮುನ್ನ ಹೂಡಿಕೆದಾರರು ಬ್ಲೂ ಚಿಪ್ ಶೇರುಗಳ ಖರೀದಿಯಲ್ಲಿ ತೊಡಗಿಕೊಂಡದ್ದೇ ಮಾರುಕಟ್ಟೆಯಲ್ಲಿ ಏರಿಕೆಗೆ ಕಾರಣವಾಗಿದೆ ಎನ್ನಲಾಗಿದೆ.
Advertisement