ಬೆಂಗಳೂರು ರೈಲು ಯೋಜನೆಗಳಿಗಾಗಿ ಬಜೆಟ್ ನಲ್ಲಿ 3,174 ಕೋಟಿ ರು. ಹಣ ನೀಡಿದ ಜೇಟ್ಲಿ

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಲೋಕಸಭೆಯಲ್ಲಿ ಬುಧವಾರ ಮಂಡಿಸಿದ 2017–18ನೇ ಸಾಲಿನ ಬಜೆಟ್‌ನಲ್ಲಿ ನೈರುತ್ಯ ರೈಲ್ವೆಗೆ 3,174 ...
ಸಾಂದರ್ಬಿಕ ಚಿತ್ರ
ಸಾಂದರ್ಬಿಕ ಚಿತ್ರ

ಬೆಂಗಳೂರು: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಲೋಕಸಭೆಯಲ್ಲಿ ಬುಧವಾರ ಮಂಡಿಸಿದ 2017–18ನೇ ಸಾಲಿನ ಬಜೆಟ್‌ನಲ್ಲಿ ನೈರುತ್ಯ ರೈಲ್ವೆಗೆ 3,174 ಕೋಟಿ ರು. ಹಂಚಿಕೆ ಮಾಡಿದ್ದಾರೆ.

ಕಳೆದ ವರ್ಷದ ಅನುದಾನಕ್ಕಿಂತ ಶೇ 19.17ರಷ್ಟು ಜಾಸ್ತಿ ಇದೆ. 2016–17ನೇ ಸಾಲಿನಲ್ಲಿ 2,663.42 ಕೋಟಿ ಹಂಚಿಕೆ ಮಾಡಲಾಗಿತ್ತು. ಅಂದರೆ ಸುಮಾರು 400 ಕೋಟಿ ರು ಹೆಚ್ಚಿಗೆ ಹಣ ನೀಡಲಾಗಿದೆ ಎಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಶೋಕ್ ಗುಪ್ತಾ ಹೇಳಿದ್ದಾರೆ.

ಹೆಚ್ಚುವರಿ ಹಣ ಹಂಚಿಕೆಯಾಗಿರುವುದು ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಅನುಕೂಲ ಆಗಲಿದೆ.  ಹಳೆಯ ರೈಲು ಹಾಗೂ ಕೋಚ್ ಗಳನ್ನು ಮೇಲ್ದರ್ಜೆಗೇರಿಸಲು ಸಹಾಯವಾಗಲಿದೆ. ಸುರಕ್ಷತಾ ನಿಧಿಗಾಗಿ 1 ಲಕ್ಷ ಕೋಟಿ ರು ಮೀಸಲಿಟ್ಟಿರುವುದು, ರೈಲು ಪ್ರಯಾಣಿಕರಿಗೆ ಹೆಚ್ಚಿನ ರಕ್ಷಣೆ ಒದಗಿಸಲು ಸಾಧ್ಯ.ವಾಗುತ್ತದೆ ಎಂದು ವಿಭಾಗೀಯ ಎಂಜಿನೀಯರ್ ಲಕ್ಷ್ಮಣ್ ಸಿಂಗ್ ತಿಳಿಸಿದ್ದಾರೆ.

ನೈರುತ್ಯ ರೈಲ್ವೆ ವಲಯ ವ್ಯಾಪ್ತಿಯ ಯಾವ ಯೋಜನೆಗೆ ಎಷ್ಟು ಅನುದಾನ ಹಂಚಿಕೆ ಮಾಡಲಾಗಿದೆ ಎಂಬುದರ ವಿವರಗಳು ಇನ್ನೂ ಲಭ್ಯವಾಗಿಲ್ಲ. ಶುಕ್ರವಾರ ಅಥವಾ ಶನಿವಾರ ಯೋಜನಾವಾರು ಮಾಹಿತಿ ದೊರೆಯಲಿದೆ ಎಂದು ಅವರು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com