ಆಂಧ್ರ ನೂತನ ರಾಜಧಾನಿಗೆ ಭೂಮಿ ನೀಡಿದ ರೈತರಿಗೆ ತೆರಿಗೆಯಿಂದ ವಿನಾಯ್ತಿ

ಆಂಧ್ರಪ್ರದೇಶದ ನೂತನ ರಾಜಧಾನಿಗಾಗಿ ತಮ್ಮ ಭೂಮಿ ನೀಡಿದ ಸುಮಾರು 22 ಸಾವಿರ ರೈತರಿಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಆಂಧ್ರಪ್ರದೇಶದ ನೂತನ ರಾಜಧಾನಿಗಾಗಿ ತಮ್ಮ ಭೂಮಿ ನೀಡಿದ ಸುಮಾರು 22 ಸಾವಿರ ರೈತರಿಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಬುಧವಾರ ತಮ್ಮ ಬಜೆಟ್ ನಲ್ಲಿ ಬಂಪರ್ ಕೊಡುಗೆ ಘೋಷಿಸಿದ್ದು, ಬಂಡವಾಳ ಆದಾಯ ತೆರಿಗೆಯಿಂದ ವಿನಾಯ್ತಿ ನೀಡಿದ್ದಾರೆ.
ಕೇಂದ್ರ ಸರ್ಕಾರದ ಈ ಕ್ರಮದಿಂದಾಗಿ ರೈತರಿಗೆ ಸುಮಾರು 10 ಲಕ್ಷದಿಂದ 30 ಲಕ್ಷದವರೆಗೆ ಲಾಭವಾಗುವ ಸಾಧ್ಯತೆ ಇದ್ದು, ಅದು ರೈತರ ಭೂಮಿಯ ವಾಣಿಜ್ಯ ಮೌಲ್ಯದ ಆಧಾರದ ಮೇಲೆ ನಿರ್ಧಾರವಾಗುತ್ತದೆ.
ಆಂಧ್ರ ಪ್ರದೇಶ ಸರ್ಕಾರ ನೂತನ ರಾಜಧಾನಿ ನಿರ್ಮಾಣಕ್ಕಾಗಿ ಲ್ಯಾಂಡ್ ಪೂಲಿಂಗ್ ಯೋಜನೆಯಡಿ ರೈತರಿಂದ ಸುಮಾರು 33 ಸಾವಿರ ಎಕರೆ ಭೂಮಿ ವಶಪಡಿಸಿಕೊಂಡಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರಕ್ಕಾಗಿ ನಾನು ಅರುಣ್ ಜೇಟ್ಲಿ ಅವರಿಗೆ ವಿಶೇಷ ಧನ್ಯವಾದ ಹೇಳುತ್ತೇನೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ವೈ.ಎಸ್.ಚೌದರಿ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com