ಬಜೆಟ್ ಮಂಡನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಬಜೆಡ್ ಮಂಡಿಸಿದ ಅನುಭವವನ್ನು ಹಂಚಿಕೊಂಡಿದ್ದಾರೆ.
ಫೆಬ್ರವರಿ 16ನೇ ದಿನದಂದು ರಾಜ್ಯದ 98ನೇ ಹಾಗೂ ನನ್ನ 13ನೇ ಬಜೆಟ್ ಮಂಡಿಸುತ್ತಿರುವ ಈ ಸಮಯದಲ್ಲಿ ನನ್ನ ಮೊದಲ ಬಜೆಟ್ ಮಂಡನೆ ನೆನಪಾಗುತ್ತಿದೆ.
ನಾನು ಮೊದಲನೇ ಬಜೆಟ್ ಮಂಡನೆ ಮಾಡಿದ್ದು, 1994ರಲ್ಲಿ. ಅಂದು ದೇವೇಗೌಡರು ಮುಖ್ಯಮಂತ್ರಿಗಳಾಗಿದ್ದರು. ಹೊಸದಾಗಿ ಹಣಕಾಸು ಸಚಿವನಾಗಿದ್ದೆ. ಸ್ವಲ್ಪ ಅಂಜಿಕೆಯಿತ್ತು. ಏಕೆಂದರೆ ನಾನು ಅರ್ಥಶಾಸ್ತ್ರ ಓದಿದವನಲ್ಲ. ಆದರೆ ಅರ್ಥಶಾಸ್ತ್ರಜ್ಞರ ಜೊತೆಗೆ ಚರ್ಚೆ ನಡೆಸಿ, ತಿಳಿದುಕೊಂಡಿದ್ದೆ. ಬಳಿಕ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಾಗಿತ್ತು. ನನ್ನ ಅಷ್ಟೆಲ್ಲಾ ತಯಾರಿ ಮೊದಲನೇ ಬಜೆಟ್ ಪ್ರಶಂಸೆಗೂ ಒಳಗಾಗಿತ್ತು.
ಮೊದಲನೇ ಬಜೆಟ್ ಮಂಡನೆ ಸಂದರ್ಭದಲ್ಲಿ ಕೆಲವರು ನನ್ನನ್ನು ಅಪಹಾಸ್ಯ ಮಾಡಿದ್ದರು. ಸಿದ್ದರಾಮಯ್ಯ ಅವರಿಗೆ 100 ಕುರಿ ಲೆಕ್ಕ ಹಾಕುವುದಕ್ಕೆ ಬರುವುದಿಲ್ಲ. ಇಂತಹವರು ಹಣಕಾಸು ಮತ್ರಿ ಮಾಡಿ ತಪ್ಪು ಮಾಡಿದ್ದಾರೆಂದು ಹೇಳಿದ್ದರು.
ಅಂತಹ ಅಪಹಾಸ್ಯಗಳಿಗೆ ನನ್ನ ಈವರೆಗಿನ 12 ಬಜೆಟ್ ಗಳೇ ಉತ್ತರವಾಗಿದೆ. ಮೊದಲಿದ್ದ ಅಂಜಿಕೆ ಈಗಿಲ್ಲ. ಯಾವುದೇ ಆತಂಕವಿಲ್ಲದೆ ಆರಾಮವಾಗಿ ಬಜೆಟ್ ತಯಾರಿ ಮಾಡಿಕೊಂಡು ಮಂಡನೆ ಮಾಡುತ್ತಿದ್ದೇನೆಂದು ಹೇಳಿದ್ದಾರೆ.