ಕರ್ನಾಟಕ ಬಜೆಟ್ 2018: ಪ್ರವಾಸೋದ್ಯಮ ಇಲಾಖೆಗೆ ಸಿಎಂ ಸಿದ್ದರಾಮಯ್ಯ ನಿಡಿದ್ದೇನು?

2018 -19 ಸಾಲಿನ ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪ್ರವಾಸೋದ್ಯಮ ಇಲಾಖೆಗೆ 459 ಕೋಟಿ ಅನುದಾನ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: 2018 -19 ಸಾಲಿನ ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪ್ರವಾಸೋದ್ಯಮ ಇಲಾಖೆಗೆ 459 ಕೋಟಿ ಅನುದಾನ ನೀಡಿದ್ದಾರೆ.
ಪ್ರಮುಖವಾಗಿ ರಾಜ್ಯದಲ್ಲಿ ಪ್ರಮುಖ ಪ್ರವಾಸಿ ತಾಣಗಳಲ್ಲಿನ ಮೂಲಭೂತ ಸೌಕರ್ಯ ಮೇಲ್ದರ್ಜೆಗೇರಿಸಲು ಈ ಬಾರಿ ಬಜೆಟ್ ನಲ್ಲಿ  ಕ್ರಮಕೈಗೊಳ್ಳಲಾಗಿದೆ. ಪ್ರಮುಖವಾಗಿ ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ 'ಚಲನಚಿತ್ರ ಅಭಿವೃದ್ಧಿ  ನೀತಿ' ಜಾರಿ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದು, ಉತ್ತರ ಕರ್ನಾಟಕ ಕಲೆ ಸಂಸ್ಕೃತಿ ಅಭಿವೃದ್ಧಿಗಾಗಿ 'ಕಲಬುರಗಿ ಕಲಾಭವನ' ನಿರ್ಮಾಣ ಮಾಡಲಾಗುತ್ತದ ಎಂದು ಹೇಳಿದ್ದಾರೆ.
ಅಲ್ಲದೆ 20 ಪಾರಂಪರಿಕ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಚಿಂತನೆ ಮಾಡಲಾಗಿದ್ದು, 'ದೆಹಲಿ ಹಾಟ್' ಮಾದರಿಯಂತೆ 'ಮೈಸೂರು ಹಾಟ್' ಅಭಿವೃದ್ಧಿಗೆ ಪ್ರಸ್ತಾಪಿಸಲಾಗಿದೆ. ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ನಿಖರ  ಮಾಹಿತಿಗಾಗಿ ಮಾಹಿತಿ ಸಮೀಕ್ಷೆಗೆ ಕ್ರಮ ಕೈಗೊಳ್ಳಲಾಗಿದ್ದು, ಕರಾವಳಿಯ ಪ್ರವಾಸಿ ಸ್ಥಳಗಳಲ್ಲಿ 'ಹೌಸ್ ಬೋಟ್' ಸೇವೆ ಆರಂಭಿಸಲಾಗುತ್ತದೆ. ಅಂತೆಯೇ ಡಾ. ರಾಜ್‌ಕುಮಾರ್ ಸಮಾಧಿ ಸ್ಥಳದಲ್ಲಿ ಸುಸಜ್ಜಿತ ಯೋಗ ಕೇಂದ್ರ  ಸ್ಥಾಪನೆ ಮಾಡಲಾಗುತ್ತದೆ. 
ಆಂಧ್ರದ ತಿರುಮಲದಲ್ಲಿ 20 ಕೋಟಿ ರೂಪಾಯಿ ವೆಚ್ಚದಲ್ಲಿ ಅತಿಥಿಗೃಹ ನಿರ್ಮಾಣ ಮಾಡಲಾಗುತ್ತದೆ. ಅಲ್ಲದೆ ಪ್ರವಾಸಿಗರನ್ನು ಆಕರ್ಷಿಸಲು ಬೆಂಗೂರಿನಲ್ಲಿ ಡಬಲ್ ಡೆಕ್ಕರ್ ಬಸ್ ಸೇವೆ ಆರಂಭಿಸಲಾಗುತ್ತದೆ. ಇದಕ್ಕಾಗಿ 10 ಡಬಲ್  ಡೆಕ್ಕರ್ ಬಸ್ ಖರೀದಿಗೆ ನಿರ್ಧಾರಿಸಲಾಗಿದೆ. ಇದಲ್ಲದೆ 30 ಬಸ್ ನಿಲ್ದಾಣ, 8 ಬಸ್ ಗಳ ಘಟಕ, 325 ಬಸ್ ತಂಗುದಾಣ ಮೇಲ್ಜರ್ಜೆಗೆ ಏರಿಸಲು ನಿರ್ಧರಿಸಲಾಗಿದೆ.ಅಂತೆಯೇ ಬೆಳಗಾವಿಯಲ್ಲಿ 3 ಕೋಟಿ ವೆಚ್ಚದಲ್ಲಿ ಮಿನಿ 3-D  ತಾರಾಲಾಯ ಸ್ಥಾಪನೆ ಮಾಡಲಾಗುತ್ತದೆ. ದಸರಾದಲ್ಲಿ ದಸರಾ ಸಿಎಂ ಕಪ್ ಕ್ರೀಡಾಕೂಟಕ್ಕೆ 7 ಕೋಟಿ ರೂ. ಅನುದಾನ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com