ಸಾರಿಗೆ ಇಲಾಖೆಯಲ್ಲಿ ಪ್ರಮುಖವಾಗಿ ಮಹಿಳಾ ಉದ್ಯೊಗ ಸೃಷ್ಟಿಗೆ ಒತ್ತು ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, ನಿರುದ್ಯೋಗಿ ಮಹಿಳೆಯರಿಗಾಗಿ ವಾಹನ ಚಾಲನಾ ತರಬೇತಿ ಕಾರ್ಯಕ್ರಮ ಘೋಷಣೆ ಮಾಡಿದ್ದು, ಇದಕ್ಕಾಗಿ ಬೆಂಗಳೂರು, ಧಾರವಾಡದಲ್ಲಿ ಭಾರಿ ವಾಹನ ಚಾಲನೆ ತರಬೇತಿ ಕೇಂದ್ರ ಆರಂಭಿಸುವುದಾಗಿ ಘೋಷಣೆ ಮಾಡಿದ್ದಾರೆ. ಇದರ ಹೊರತಾಗಿ ಹೆದ್ದಾರಿ ಅಭಿವೃದ್ಧಿ ಯೋಜನೆ ಹಂತ 4 - 2 722 ಕಿ.ಮೀ. ವಿಸ್ತರಣೆಗಾಗಿ ಹೆದ್ದಾರಿ ಅಭಿವೃದ್ಧಿ ಯೋಜನೆಗೆ 3480 ಕೋಟಿ ಮೀಸಲಿಟ್ಟಿದ್ದಾರೆ.