ಬಜೆಟ್ ಮಂಡನೆ ಮಾಡುತ್ತಿರುವ ಅರುಣ್ ಜೇಟ್ಲಿ
ಬಜೆಟ್ ಮಂಡನೆ ಮಾಡುತ್ತಿರುವ ಅರುಣ್ ಜೇಟ್ಲಿ

75ನೇ ಸ್ವಾತಂತ್ರ್ಯದಿನಾಚರಣೆ ವೇಳೆಗೆ ದೇಶದ ರೈತರ ಆದಾಯ ದ್ವಿಗುಣ: ಬಜೆಟ್ ಭಾಷಣದಲ್ಲಿ ಜೇಟ್ಲಿ ಹೇಳಿಕೆ

ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ದೇಶದ ರೈತರ ಆದಾಯ ದ್ವಿಗುಣವಾಗಲಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ನವದೆಹಲಿ: ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ದೇಶದ ರೈತರ ಆದಾಯ ದ್ವಿಗುಣವಾಗಲಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಸಂಸತ್ ನಲ್ಲಿ ಇಂದು ತಮ್ಮ 5ನೇ ಬಜೆಟ್ ಮಂಡಿಸಿದ ಅರುಣ್ ಜೇಟ್ಲಿ, ರೈತರು ಮತ್ತು ಕೃಷಿ ಕ್ಷೇತ್ರದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಗಂಭೀರವಾಗಿದೆ. ರೈತರ ಮತ್ತು ಕೃಷಿಕ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಬದ್ಧವಾಗಿದ್ದು,  4  ವರ್ಷಗಳಿಂದ ಸ್ವಚ್ಛ ಆಡಳಿತ ನೀಡುತ್ತಿದ್ದೇವೆ. ಬಡತನ ನಿರ್ಮೂಲನೆಗೆ ಗಮನ ಹರಿಸಿದ್ದೇವೆ ಎಂದು ಹೇಳಿದರು. ಅಂತೆಯೇ ಕೇಂದ್ರ ಸರ್ಕಾರ 2020ಕ್ಕೆ ರೈತರ ಆದಾಯ ದ್ವಿಗುಣಗೊಳಿಸುವ ಗುರಿ ಹೊಂದಿದ್ದು, ಕೃಷಿಯನ್ನು  ಲಾಭೋದ್ಯಮವಾಗಿಸಲು ಕೇಂದ್ರದ ಸಂಕಲ್ಪ ಕೈಗೊಳ್ಳಲಾಗಿದೆ. ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದೇ ಕೇಂದ್ರ ಸರ್ಕಾರದ ಗುರಿಯಾಗಿದೆ ಎಂದು ಹೇಳಿದರು.
ಕೃಷಿ ಉತ್ಪನ್ನಗಳ ಸಾಗಣೆ, ಉತ್ತಮ ಬೆಲೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕೃಷಿ ಉತ್ಪಾದನೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದೆ. ಉತ್ಪಾದನಾ ವಲಯ ಪ್ರಗತಿಯಲ್ಲಿದ್ದು, ಭಾರತ ಉತ್ಪಾದನೆಯಲ್ಲಿ ಶೀಘ್ರವಾಗಿ 5ನೇ  ಸ್ಥಾನಕ್ಕೇರಲಿದೆ. 2ನೇ ದೈವಾರ್ಷಿಕದಲ್ಲಿ ಭಾರತದ ಜಿಡಿಪಿ ಶೇ.7.5ರ ನಿರೀಕ್ಷೆಯಲ್ಲಿದ್ದೇವೆ. 275 ಮಿಲಿಯನ್ ಟನ್ ಆಹಾರ ಉತ್ಪಾದನೆಯಾಗಿದ್ದು, ಈ ರಬಿ ಕೃಷಿಯಲ್ಲಿ ಅಧಿಕ ಇಳುವರಿ ಬಂದಿದೆ. ಕೃಷಿ ಉತ್ಪಾದನಾ ದರ ಶೇ.1.5ರಷ್ಟು  ಇಳಿಕೆಗೆ ಕ್ರಮಕೈಗೊಳ್ಳಲಾಗಿದ್ದು, ಕೃಷಿ ವಲಯದಲ್ಲಿ ವೈಜ್ಞಾನಿಕ ಪದ್ಧತಿ ಮೂಲಕ ಉತ್ಪಾದನೆ ಹೆಚ್ಚಳ. ಸರ್ಕಾರಿ ಯೋಜನೆಗಳು ನೇರವಾಗಿ ಜನರಿಗೆ ತಲುಪಿವೆ. ಬಲಿಷ್ಠ ಭಾರತ ನಿರ್ಮಾಣಕ್ಕೆ ಕಟಿಬದ್ಧರಾಗಿದ್ದೇವೆ.
ರೈತರ ಅನುಕೂಲಕ್ಕೆ 22 ಸಾವಿರ ಮಾರುಕಟ್ಟೆ ನಿರ್ಮಾಣ, ಗ್ರಾಮೀಣ ಮೂಲಸೌಕರ್ಯಕ್ಕೆ 22ಸಾವಿರ ಕೋಟಿ ಅನುದಾನ ನೀಡಲಾಗಿದೆ. ದೇಶದ ಉತ್ಪಾದನಾ ಸಾಮರ್ಥ್ಯ ಶೇ.15ರಷ್ಟು ಹೆಚ್ಚಳ ನಿರೀಕ್ಷೆ. 470ಎಪಿಎಂಸಿ  ಮಾರುಕಟ್ಟೆಗಳು ಆನ್ ಲೈನ್ ಆಗಿವೆ. ಕೃಷಿಕ ಮೂಲಭೂತ ಸುಧಾರಣೆಗಳನ್ನು ಜಾರಿಗೆ ತಂದಿದ್ದೇವೆ. ಆಪರೇಷನ್ ಗ್ರೀನ್ ಯೋಜನೆಯಡಿಯಲ್ಲಿ ಇದು 500 ಕೋಟಿ ರೂ. ಮೀಸಲಿರಸಲಾಗಿದ್ದು, ರೈತರು ಬೆಳೆದ ಹಣ್ಣು, ತರಕಾರಿಗಳ  ಸಂಸ್ಕರಣೆಗಾಗಿ ಈ ಯೋಜನೆ ಬಳಕೆ ಮಾಡುತ್ತಿದ್ದಾರೆ. ಆಹಾರ ಸಂಸ್ಕರಣಾ ಕ್ಷೇತ್ರ ಶೇ.8ರಷ್ಟು ಅಭಿವೃದ್ಧಿ ಕಂಡಿದ್ದು, 1290ಕೋಟಿ ರೂಪಾಯಿಯಲ್ಲಿ ಬಿದಿರು ಯೋಜನೆ. ಮೀನುಗಾರಿಕೆ, ಪಶು ಸಂಗೋಪನೆಗೆ 10 ಸಾವಿರ ಕೋಟಿ  ರು.ಮೀಸಲಿರಿಸಲಾಗಿದೆ. ಅಂತೆಯೇ ಟೊಮ್ಯಾಟೋ, ಈರುಳ್ಳಿ, ಆಲೂಗಡ್ಡೆ ಕೃಷಿಗೆ 500 ಕೋಟಿ ರೂ ಅನುದಾನ ಘೋಷಣೆ ಜಿಲ್ಲೆಗಳಿಗೆ ವಿಶೇಷ ಕ್ಲಸ್ಟರ್ ಪದ್ಧತಿ, ಈ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದ್ದು, ಬಿದಿರು ಬೆಳೆಗೆ 12,090  ಕೋಟಿ ರೂ ವಿಶೇಷ ಅನುದಾನ ನೀಡಲಾಗಿದೆ ಎಂದು ಜೇಟ್ಲಿ ಹೇಳಿದರು.
ಅಂತೆಯೇ ಗ್ರಾಮಾಂತರ ಬಜಾರ್-ಇ ನಿರ್ಮಿಸಲು ಯೋಜನೆ, 2022 ವೇಳೆಗೆ ಮನೆ ಇಲ್ಲದವರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ ಸ್ವಂತ ಮನೆ ನಿರ್ಮಾಣ ಮಾಡಲು ಯೋಜನೆ, 2018-19 ರಲ್ಲಿ ಗ್ರಾಮೀಣ ಭಾಗದಲ್ಲಿ  ಮನೆ ನಿರ್ಮಾಣ ಮಾಡುವ ಕುರಿತು ಯೋಜನೆ ರೂಪಿಸಲಾಗಿದೆ. 8 ಕೋಟಿ ಮಹಿಳೆಯರಿಗೆ ಉಚಿತ ಗ್ಯಾಸ್ ಪೂರೈಕೆ, 42 ಮೆಗಾ ಫುಡ್ ಪಾರ್ಕ್ ಪ್ರಾರಂಭ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಲೆ ನೀಡಲು ನಿರ್ಧಾರ, ಎಪಿಎಂಸಿ  ಉನ್ನತೀಕರಣಕ್ಕೆ 2,000 ಕೋಟಿ ಅಹಾರ ಸಂಸ್ಕರಣೇ ಖಾದಿ ಗ್ರಾಮೋದ್ಯಮಕ್ಕೆ 200 ಕೋಟಿ ಅನುದಾನ ಪರೇಷನ್ ಗ್ರೀನ್ ಗೆ 500 ಕೋಟಿ ರೂ ಮೀಸಲಿಡಲಾಗಿದೆ. ರೈತರ ಸಾಲಗಳಿಗಾಗಿ 11 ಲಕ್ಷ ಕೋಟಿ ಅನುದಾನ ಬೆಳೆಯನ್ನು ನೇರವಾಗಿ ಮಾರಾಟ ಮಾಡಲು ಅವಕಾಶ ಎಂದು ಜೇಟ್ಲಿ ಹೇಳಿದರು.

Related Stories

No stories found.

Advertisement

X
Kannada Prabha
www.kannadaprabha.com