
ದೆಹಲಿ:ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಗ್ರಾಮೀಣಾಭಿವೃದ್ದಿ, ಕೃಷಿ, ಬಡ ಹಿಂದುಳಿದ ವರ್ಗದವರ ಕಲ್ಯಾಣ, ಡಿಜಿಟಲ್ ಇಂಡಿಯಾಕ್ಕೆ ಒತ್ತು ನೀಡುವ ಮೂಲಕ ದೇಶದ ಪ್ರಗತಿಗೆ ಪೂರಕವಾದ ಜನಪರ ಬಜೆಟ್ ಮಂಡಿಸಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರಮೋದಿ ಹೇಳಿದ್ದಾರೆ.
ಬಜೆಟ್ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಕೃಷಿ ,ಮೂಲಸೌಕರ್ಯ ಅಭಿವೃದ್ದಿ ಸೇರಿದಂತೆ ಎಲ್ಲಾ ಕ್ಷೇತ್ರಗಳ ಅಭಿವೃದ್ದಿಗೆ ಆದ್ಯತೆ ನೀಡಲಾಗಿದೆ. ರೈತ, ಸ್ನೇಹಿ. ಜನಸಾಮಾನ್ಯರ, ಹಾಗೂ ಹೂಡಿಕೆಗೆ ಪೂರಕವಾದ ಬಜೆಟ್ ಮಂಡಿಸಲಾಗಿದೆ ಎಂದು ತಿಳಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಲ್ಯಾಣಕ್ಕಾಗಿ 1 ಲಕ್ಷ ಕೋಟಿ ರೂ. ಮೀಸಲಿರಿಸಲಾಗಿದೆ. ಬಡವರು ಆರ್ಥಿಕವಾಗಿ ಹಿಂದುಳಿದವ ವರ್ಗದವರಿಗೆ ಆರೋಗ್ಯ ಯೋಜನೆ ಜಾರಿ ಮಾಡಲಾಗಿದೆ. ಆಯುಷ್ಮನ್ ಭಾರತ್ ಯೋಜನೆಯಿಂದ 10 ಕೋಟಿ ಜನರಿಗೆ ಆರೋಗ್ಯ ಸೌಲಭ್ಯ ದೊರಕಲಿದೆ. ವಿಶ್ವದಲ್ಲಿಯೇ ಇದು ಅತಿದೊಡ್ಡ ಸರ್ಕಾರದ ನೆರವಿನ ಆರೋಗ್ಯ ಕಾರ್ಯಕ್ರಮವಾಗಿದೆ ಎಂದರು.
ಯುವಕರ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗಿದೆ. ಮಹಿಳೆಯರ ಭವಿಷ್ಯ ನಿಧಿ ದೇಣಿಗೆಯನ್ನು ಶೇಕಡ 8ಕ್ಕೆ ಇಳಿಸಲಾಗಿದೆ. ಆದರೆ, ಮಾಲೀಕರು ಶೇಕಡಾ 12 ರಷ್ಟು ನೀಡಬೇಕಿದೆ. ಮಧ್ಯಮವರ್ಗದವರು ಹೆಚ್ಚಿನ ಉಳಿತಾಯಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
.
Advertisement