ಕೇಂದ್ರ ಬಜೆಟ್ 2018: ಮಹಿಳೆಯರ ಇಪಿಎಫ್ ಕೊಡುಗೆ ಶೇ.12 ರಿಂದ ಶೇ.8ಕ್ಕೆ ಇಳಿಕೆ

2018-19ನೇ ಸಾಲಿನ ಕಂದ್ರ ಬಜೆಟ್'ನಲ್ಲಿ ಮಹಿಳೆಯರಿಗೆ ಸಿಹಿ ಸುದ್ದಿ ನೀಡಿರುವ ಹಣಕಾಸು ಸಚಿವ ಅರುಣ್ ಜೇಟ್ಲಿಯವರು, ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್) ಕಾಯ್ದೆಗೆ ತಿದ್ದುಪಡಿ ತಂಡು ಮಹಿಳೆಯರ ಇಪಿಎಫ್ ಕೊಡುಗೆ ಶೇ.12 ರಿಂದ ಶೇ.8ಕ್ಕೆ ಇಳಿಕೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: 2018-19ನೇ ಸಾಲಿನ ಕಂದ್ರ ಬಜೆಟ್'ನಲ್ಲಿ ಮಹಿಳೆಯರಿಗೆ ಸಿಹಿ ಸುದ್ದಿ ನೀಡಿರುವ ಹಣಕಾಸು ಸಚಿವ ಅರುಣ್ ಜೇಟ್ಲಿಯವರು, ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್) ಕಾಯ್ದೆಗೆ ತಿದ್ದುಪಡಿ ತಂಡು ಮಹಿಳೆಯರ ಇಪಿಎಫ್ ಕೊಡುಗೆ ಶೇ.12 ರಿಂದ ಶೇ.8ಕ್ಕೆ ಇಳಿಕೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. 
2018-19 ನೇ ಸಾಲಿನ ಬಜೆಟ್ ಮಂಡನೆ ಮಾಡಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಯವರು, 8 ಕೋಟಿ ಮಹಿಳೆಯರಿಗೆ ಉಚಿತ ಗ್ಯಾಸ್ ಪೂರೈಕೆ, ಹೆರಿಗೆ ರಜೆಯನ್ನು 24 ವಾರದಿಂದ 26 ವಾರಕ್ಕೆ ಹೆಚ್ಚಳ, ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್) ಕಾಯ್ದೆಗೆ ತಿದ್ದುಪಡಿ ತಂದು ಮಹಿಳೆಯರ ಇಪಿಎಫ್ ಕೊಡುಗೆ ಶೇ.12 ರಿಂದ ಶೇ.8ಕ್ಕೆ ಇಳಿಕೆ ಮಾಡುವುದಾಗಿ ಘೋಷಿಸಿದ್ದಾರೆ. ಆದರೆ, ಕಂಪನಿ ಅಥವಾ ಉದ್ಯೋಗದಾರ ನೀಡಬೇಕಾದ ಶೇ.12 ಕೊಡುಗೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ನಿಯಮ ಮೂರು ವರ್ಷದವರೆಗೆ ಮಾತ್ರ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ. 
ಮಹಿಳೆಯರ ಇಪಿಎಫ್ ಕೊಡುಗೆಯನ್ನು ಶೇ.12 ರಿಂದ ಶೇ.8ಕ್ಕೆ ಇಳಿಕೆ ಮಾಡುವುದರಿಂದ ಮಹಿಳಾ ಉದ್ಯೋಗಿಗಳ ಕೈಗೆ ಸಿಗುವ ವೇತನದ ಪ್ರಮಾಣ ಹೆಚ್ಚಾಗುತ್ತದೆ. ಅಂದರೆ ಮಹಿಳಾ ಉದ್ಯೋಗಿಗಳ ಕೊಡುಗೆ ಶೇ.8 ರಷ್ಟಾದರೆ, ಉದ್ಯೋಗದಾತರ ಕೊಡುಗೆ ಶೇ.12 ರಷ್ಟೇ ಇರುತ್ತದೆ. 
ಪ್ರತೀ ತಿಂಗಳು ಉದ್ಯೋಗಿ ಮತ್ತು ಕಂಪನಿ ನೀಡುತ್ತಿದ್ದ ತಲಾ ಶೇ.12 ರಷ್ಟು ಕೊಡುಗೆಯನ್ನು ಉದ್ಯೋಗಿ ನಿವೃತ್ತಿಯಾದ ನಂತರ ಆತನ ಭವಿಷ್ಯಕ್ಕಾಗಿ ನೀಡಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com