ಕೇಂದ್ರ ಬಜೆಟ್ 2019: ಹಿರಿಯ ಉದ್ಯೋಗಿಗಳಿಗೆ ಸಿಹಿ ಸುದ್ದಿ, ತೆರಿಗೆ ರಹಿತ ಗ್ರಾಚ್ಯುಟಿ ಮಿತಿ 20 ಲಕ್ಷ ರೂ. ಗೆ ಏರಿಕೆ

ವೇತನ ಪಡೆಯುವ ಹಿರಿಯ ಉದ್ಯೋಗಿಗಳಿಗೆ ಕೇಂದ್ರ ವಿತ್ತ ಸಚಿವ ಪಿಯೂಶ್ ಗೋಯಲ್ ಸಿಹಿ ಸುದ್ದಿ ನೀಡಿದ್ದು, ತೆರಿಗೆ ರಹಿತ ಗ್ರಾಚ್ಯುಟಿ ಮಿತಿ 20 ಲಕ್ಷ ರೂ ಗಳಿಗೆ ಏರಿಕೆ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ವೇತನ ಪಡೆಯುವ ಹಿರಿಯ ಉದ್ಯೋಗಿಗಳಿಗೆ ಕೇಂದ್ರ ವಿತ್ತ ಸಚಿವ ಪಿಯೂಶ್ ಗೋಯಲ್ ಸಿಹಿ ಸುದ್ದಿ ನೀಡಿದ್ದು, ತೆರಿಗೆ ರಹಿತ ಗ್ರಾಚ್ಯುಟಿ ಮಿತಿ 20 ಲಕ್ಷ ರೂ ಗಳಿಗೆ ಏರಿಕೆ ಮಾಡಿದ್ದಾರೆ.
ಇಂದು ಸಂಸತ್ ನಲ್ಲಿ ಮಂಡನೆಯಾದ 2019-20ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಸಚಿವ ಪಿಯೂಶ್ ಗೋಯಲ್ ಈ ಮಾಹಿತಿ ನೀಡಿದ್ದು, ಉದ್ಯೋಗಿಗಳ ಗ್ರಾಚ್ಯುಟಿ ಮಿತಿಯನ್ನು 10 ಲಕ್ಷ ರೂಗಳಿಂದ 20 ಲಕ್ಷ ರೂಗಳಿಗೆ ಏರಿಕೆ ಮಾಡಿರುವುದಾಗಿ ಘೋಷಣೆ ಮಾಡಿದ್ದಾರೆ. 
ಸದ್ಯ ಐದು ಅಥವಾ ಅದಕ್ಕಿಂತ ಹೆಚ್ಚು ಸೇವಾ ಅವಧಿ ಹೊಂದಿರುವ ಉದ್ಯೋಗಿಗಳು ಉದ್ಯೋಗ ತೊರೆದಾಗ ಅಥವಾ ನಿವೃತ್ತಿ ಹೊಂದಿದಾಗ 10 ರಿಂದ 20ಲಕ್ಷ ರೂ. ವರೆಗೂ ತೆರಿಗೆ ಮುಕ್ತವಾಗಿ ಗ್ರಾಚ್ಯುಟಿ ಗಳಿಸಬಹುದಾಗಿದೆ.
ಗಣಿ, ತೈಲಕ್ಷೇತ್ರ, ಫ್ಯಾಕ್ಟರಿ, ಬಂದರು, ರೈಲ್ವೇ ಕಂಪನಿಗಳು ಮೊದಲಾದ ಕಡೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಅನುಕೂಲ ಒದಗಿಸಲು ಗ್ರಾಚುಟಿ ಪಾವತಿ ಕಾಯ್ದೆ 1972 ನ್ನು ಜಾರಿಗೆ ತರಲಾಗಿದೆ. ಗ್ರಾಚ್ಯುಟಿ ಅಧಿನಿಯಮ 1972ರ ಪ್ರಕಾರ ಉದ್ಯೋಗಿಯ ಹೆಸರು ಸೇರ್ಪಡೆಗೊಂಡಿದ್ದರೆ, ನಿಮ್ಮ ಔದ್ಯೋಗಿಕ ಅನುಭವದ ಜತೆ ಲೆಕ್ಕ ಹಾಕಿ ಗ್ರಾಚ್ಯುಟಿ ನೀಡಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com