ಕೇಂದ್ರ ಬಜೆಟ್ 2022: ಆದಾಯ ತೆರಿಗೆ ಮಿತಿ ಬದಲಾವಣೆ ಇಲ್ಲ, ತೆರಿಗೆ ಸಲ್ಲಿಕೆಗೆ ಹೊಸ ನೀತಿ: ತಪ್ಪು ಸರಿಪಡಿಸಲು 2 ವರ್ಷ ಕಾಲಾವಕಾಶ

ದೇಶದಲ್ಲಿ ಇನ್ನು ಮುಂದೆ ಆದಾಯ ತೆರಿಗೆ ಸಲ್ಲಿಕೆಗೆ ಹೊಸ ನೀತಿ ಜಾರಿಗೆ ತರಲಾಗುವುದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದು, ಆದಾಯ ತೆರಿಗೆ ಸಲ್ಲಿಕೆ ವೇಳೆ ತಪ್ಪು ಸರಿಪಡಿಸಲು 2 ವರ್ಷಗಳ ಕಾಲಾವಕಾಶ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶದಲ್ಲಿ ಇನ್ನು ಮುಂದೆ ಆದಾಯ ತೆರಿಗೆ ಸಲ್ಲಿಕೆಗೆ ಹೊಸ ನೀತಿ ಜಾರಿಗೆ ತರಲಾಗುವುದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದು, ಆದಾಯ ತೆರಿಗೆ ಸಲ್ಲಿಕೆ ವೇಳೆ ತಪ್ಪು ಸರಿಪಡಿಸಲು 2 ವರ್ಷಗಳ ಕಾಲಾವಕಾಶ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಇಂದು ಕೇಂದ್ರ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್ ಅವರು, ದೇಶದಲ್ಲಿ ಹೊಸ ಐಟಿ ರಿಟರ್ನ್ಸ್ ಪರಿಚಯಿಸಲಾಗುತ್ತದೆ ಎಂದು ಹೇಳಿದರು. ಹಾಲಿ ವರ್ಷ ಆದಾಯ ತೆರಿಗೆಯಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ. ಆದಾಯ ತೆರಿಗೆ ಸಲ್ಲಿಸುವಾಗ ಆದಾಯವನ್ನು ಘೋಷಿಸಿ, ಸ್ವಯಂಪ್ರೇರಿತ ದೂರು ದಾಖಲಿಸಲು ಅವಕಾಶ ನೀಡಲಾಗುತ್ತದೆ.  ದೇಶದಲ್ಲಿ ಹೊಸ ರಿಟರ್ನ್ಸ್ ಪರಿಚಯ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದ್ದು, ತೆರಿಗೆ ಪಾವತಿ, ರಿಟರ್ನ್ಸ್ ಸಲ್ಲಿಕೆಗೆ ಹೊಸ ನೀತಿ ಜಾರಿಮಾಡಲಾಗುವುದು ಎಂದು ಹೇಳಿದರು

ಅಂತೆಯೇ ತೆರಿಗೆ ಸಲ್ಲಿಕೆ ವೇಳೆ ಸಮಸ್ಯೆ ಕಂಡು ಬಂದರೆ  2 ವರ್ಷದೊಳಗೆ ತಪ್ಪು ಸರಿಪಡಿಸುವುದಕ್ಕೆ ಅವಕಾಶ ನೀಡಲಾಗಿದೆ. ವಿಶ್ವಾಸಾರ್ಹ ತೆರಿಗೆ, ವ್ಯಾಜ್ಯವನ್ನು ಕಡಿಮೆ ಮಾಡಿ, ದೋಷಗಳನ್ನು ಸರಿಪಡಿಸಿ, ವೇಗವರ್ಧಿತ ವಾಗಿ ತೆರಿಗೆ ಸಂಗ್ರಹಕ್ಕೆ ಆದ್ಯತೆ ನೀಡಲಾಗಿದೆ. ಅಂತ್ಯದ ನವೀಕರಿಸಿದ ರಿಟರ್ನ್ ಅನ್ನು ಫೈಲ್ ಮಾಡಲು ಅವಕಾಶ ನೀಡಲಾಗಿದೆ. 

ಪರ್ಯಾಯ ತೆರಿಗೆಯನ್ನು ಕಡಿಮೆ ಮಾಡಲಾಗಿದ್ದು. ಸಹಕಾರ ಸಂಘಗಳು ನೀಡುತ್ತಿದ್ದ 18 ಮತ್ತು 1.5 % ತೆರಿಗೆ ಹೆಚ್ಚುವರಿ ಶುಲ್ಕಕ್ಕೆ 15 % ಗೆ. ಒಂದು ಕೋಟಿಯಿಂದ 10 ಕೋಟಿ ವ್ಯವಹಾರ ಇರುವ ಸಹಕಾರ ಸಂಘಗಳ ತೆರಿಗೆ 12 ರಿಂದ 7 % ಗೆ ಇಳಿಕೆ . ಇದರಿಂದ ಗ್ರಾಮೀಣ ಮತ್ತು ಕೃಷಿ ಸಮುದಾಯಕ್ಕೆ ಲಾಭವಾಗಲಿದೆ.  ಮುಂದಿನ ವರ್ಷದ ವರೆಗೆ ಸ್ಟಾರ್ಟ್ ಅಪ್ ಗಳಿಗೆ ತೆರಿಗೆ ವಿನಾಯ್ತಿ ನೀಡಲಾಗಿದ್ದು, 2023 ಮಾರ್ಚ್ ವರೆಗೆ ತೆರಿಗೆ ಕಟ್ಟಬೇಕಾಗಿಲ್ಲ 

ಸಹಕಾರ ಸಂಘಗಳ ಮೇಲಿನ ಸರ್​ಚಾರ್ಜ್ ಇಳಿಕೆ
ಸಹಕಾರ ಸಂಘಗಳ ಮೇಲಿನ ಸರ್​ಚಾರ್ಜ್ ಇಳಿಕೆ ಮಾಡಲಾಗಿದೆ. ಶೇಕಡಾ 12ರಿಂದ ಶೇಕಡಾ 7ಕ್ಕೆ ಇಳಿಕೆ ಮಾಡಲು ನಿರ್ಧರಿಸಲಾಗಿದ್ದು, ಸಹಕಾರ ಸಂಘಗಳಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. 10 ಕೋಟಿಯೊಳಗಿನ ಆದಾಯದ ಸಹಕಾರ ಸಂಘಗಳಿಗೆ ಇದು ಅನ್ವಯವಾಗುತ್ತದೆ. ಕೋ- ಆಪರೇಟಿವ್ ಸೊಸೈಟಿಗಳಿಗೂ ಇನ್ನು ಮುಂದೆ ಶೇ 15ರ ತೆರಿಗೆ. ತೆರಿಗೆ ಪದ್ಧತಿಯಲ್ಲಿ ಇರುವ ಹಲವು ಸಂಕೀರ್ಣ ಅಂಶಗಳನ್ನು ಸರಳಗೊಳಸಲಿ ಸರ್ಕಾರ ಮುಂದಾಗಿದೆ. ಆದಾಯ ತೆರಿಗೆ ಘೋಷಣೆ ಅಥವಾ ಆದಾಯ ತೆರಿಗೆ ಸಲ್ಲಿಕೆ ವೇಳೆ ಯಾವುದಾದರೂ ಆದಾಯ ಬಿಟ್ಟುಹೋಗಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ಹಾಗೂ ಹೊಸದಾಗಿ ಮತ್ತೊಮ್ಮೆ ಆದಾಯ ತೆರಿಗೆ ರಿಟರ್ನ್ಸ್​ ಸಲ್ಲಿಸಲು ಎರಡು ವರ್ಷಗಳ ಅವಕಾಶ ಸಿಗಲಿದೆ. ಅಂಗ ವೈಕಲ್ಯ ಇರುವವರಿಗೆ ಹೆಚ್ಚುವರಿಯಾದ ತೆರಿಗೆ ಡಿಡಕ್ಷನ್. ಅಂಥವರ ಪೋಷಕರು, ಪಾಲಕರಿಗೆ ದೊರೆಯಲಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com