ಕೇಂದ್ರ ಬಜೆಟ್ 2023-24: ಧೂಮಪಾನಿಗಳೇ ಗಮನಿಸಿ... ಜೇಬಿಗೆ ಕತ್ತರಿ ಹಾಕಲಿದೆ ಸಿಗರೇಟ್; ಶೇ.16ಕ್ಕೆ ಸುಂಕ ಹೆಚ್ಚಳ

ಕೇಂದ್ರ ಬಜೆಟ್ 2023-24 ಮಂಡಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಧೂಮಪಾನಿಗಳ ಜೇಬಿಗೆ ಕತ್ತರಿ ಹಾಕಿದ್ದು, ಸಿಗರೇಟ್ ಸುಂಕವನ್ನು ಶೇ.16ಕ್ಕೆ ಹೆಚ್ಚಳ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೇಂದ್ರ ಬಜೆಟ್ 2023-24 ಮಂಡಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಧೂಮಪಾನಿಗಳ ಜೇಬಿಗೆ ಕತ್ತರಿ ಹಾಕಿದ್ದು, ಸಿಗರೇಟ್ ಸುಂಕವನ್ನು ಶೇ.16ಕ್ಕೆ ಹೆಚ್ಚಳ ಮಾಡಿದ್ದಾರೆ.

ಬಜೆಟ್‌ನಲ್ಲಿ ಸಿಗರೇಟ್ ಸುಂಕ ಶೇ.16 ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿರುವುದರಿಂದ ಧೂಮಪಾನ ಅಥವಾ ಸಿಗರೇಟ್ ದುಬಾರಿಯಾಗಲಿದೆ.  

ಹೌದು... ಸಿಗರೇಟಿನ ಮೇಲಿನ ಕಸ್ಟಮ್ ಸುಂಕವನ್ನು ಹೆಚ್ಚಿಸಿರುವುದರಿಂದ ಧೂಮಪಾನವು ದುಬಾರಿ ಪ್ರತೀ ಬಜೆಟ್ ನ ಅಭ್ಯಾಸವಾಗಿ ಪರಿಣಮಿಸಿದೆ. ಸಿಗರೇಟ್ ಮೇಲಿನ ತೆರಿಗೆಯನ್ನು ಶೇಕಡಾ 16 ರಷ್ಟು ಹೆಚ್ಚಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಕೇಂದ್ರ ಬಜೆಟ್ ಮಂಡನೆಯಲ್ಲಿ ಘೋಷಣೆ ಮಾಡಿದರು.

ಕೇಂದ್ರ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಿಗರೇಟ್ ಮೇಲಿನ ತೆರಿಗೆಯನ್ನು ಹೆಚ್ಚಿಸುವುದಾಗಿ ಘೋಷಿಸಿದ ನಂತರ ಗಾಡ್‌ಫ್ರೇ ಫಿಲಿಪ್ಸ್ ಇಂಡಿಯಾ ಮತ್ತು ಐಟಿಸಿ ಲಿಮಿಟೆಡ್ ಸೇರಿದಂತೆ ಸಿಗರೇಟ್ ಕಂಪನಿಗಳ ಷೇರುಗಳು ಬುಧವಾರ ಬಿಎಸ್‌ಇಯಲ್ಲಿ ಶೇಕಡಾ 5 ರಷ್ಟು ಕುಸಿದಿವೆ.

ಗಾಡ್‌ಫ್ರೇ ಫಿಲಿಪ್ಸ್ ಷೇರುಗಳು ಬಿಎಸ್‌ಇಯಲ್ಲಿ ಶೇ.4.92 ರಷ್ಟು ಕುಸಿದು 1,828.75 ರೂ.ಗೆ ತಲುಪಿದರೆ, ಗೋಲ್ಡನ್ ಟೊಬ್ಯಾಕೋ ಶೇ.3.81ರಷ್ಟು ಕುಸಿದು ರೂ.59.4ಕ್ಕೆ ತಲುಪಿದೆ. ಷೇರುಪೇಟೆಯಲ್ಲಿ ಐಟಿಸಿ ಷೇರುಗಳು ಶೇ.0.78ರಷ್ಟು ಕಡಿಮೆಯಾಗಿ ರೂ.349ಕ್ಕೆ ವಹಿವಾಟು ನಡೆಸುತ್ತಿವೆ. ಅಂತೆಯೇ ಎನ್‌ಟಿಸಿ ಇಂಡಸ್ಟ್ರೀಸ್ ಶೇಕಡಾ 1.4 ಮತ್ತು ವಿಎಸ್‌ಟಿ ಇಂಡಸ್ಟ್ರೀಸ್ ಶೇಕಡಾ 0.35 ರಷ್ಟು ಕುಸಿದಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com