ಕೇಂದ್ರ ಬಜೆಟ್ 2023: ರೈಲ್ವೆಗೆ ಅತಿ ಹೆಚ್ಚು 2.4 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ

2023-24ರ ಕೇಂದ್ರ ಬಜೆಟ್‌ನಲ್ಲಿ ರೈಲ್ವೆಯ ಬಂಡವಾಳದ ವೆಚ್ಚವನ್ನು 2.40 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಬುಧವಾರ ಹೇಳಿದ್ದಾರೆ. 
ರೈಲ್ವೆಯ ಸಾಂದರ್ಭಿಕ ಚಿತ್ರ
ರೈಲ್ವೆಯ ಸಾಂದರ್ಭಿಕ ಚಿತ್ರ

ನವದೆಹಲಿ: 2023-24ರ ಕೇಂದ್ರ ಬಜೆಟ್‌ನಲ್ಲಿ ರೈಲ್ವೆಯ ಬಂಡವಾಳದ ವೆಚ್ಚವನ್ನು 2.40 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಬುಧವಾರ ಹೇಳಿದ್ದಾರೆ. ಲೋಕಸಭೆಯಲ್ಲಿ ಬಜೆಟ್ ಮಂಡಿಸಿದ ಸೀತಾರಾಮನ್, ರೈಲ್ವೆಗೆ 2013-2014ರಲ್ಲಿ ಒದಗಿಸಿದ ಮೊತ್ತಕ್ಕಿಂತ ಒಂಬತ್ತು ಪಟ್ಟು ಬಂಡವಾಳ ತೊಡಗಿಸಲಾಗಿದೆ ಎಂದು ಹೇಳಿದರು.

ಕಲ್ಲಿದ್ದಲು, ರಸಗೊಬ್ಬರ ಮತ್ತು ಆಹಾರ ಧಾನ್ಯ ಕ್ಷೇತ್ರಗಳಿಗೆ ಕೊನೆಯ ಮತ್ತು ಮೊದಲ ಮೈಲಿ ಸಂಪರ್ಕಕ್ಕಾಗಿ 100 ನಿರ್ಣಾಯಕ ಸಾರಿಗೆ ಮೂಲಸೌಕರ್ಯ ಯೋಜನೆಗಳನ್ನು ಗುರುತಿಸಲಾಗಿದೆ ಮತ್ತು ಖಾಸಗಿ ಮೂಲಗಳಿಂದ ರೂ 15,000 ಕೋಟಿ ಸೇರಿದಂತೆ ರೂ 75,000 ಕೋಟಿ ಹೂಡಿಕೆಯೊಂದಿಗೆ ಆದ್ಯತೆಯ ಆಧಾರದ ಮೇಲೆ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು. 

ಹೆಚ್ಚಿದ ಪ್ರಯಾಣಿಕರ ನಿರೀಕ್ಷೆಯೊಂದಿಗೆ, ರಾಜಧಾನಿ, ಶತಾಬ್ದಿ, ಡುರೊಂಟೊ, ಹಮ್ಸಾಫರ್ ಮತ್ತು ತೇಜಸ್‌ನಂತಹ ಪ್ರೀಮಿಯರ್ ರೈಲುಗಳ 1,000 ಕ್ಕೂ ಹೆಚ್ಚು ಬೋಗಿಗಳನ್ನು  ನವೀಕರಿಸಲು ರೈಲ್ವೆ ಯೋಜಿಸುತ್ತಿದೆ. ಈ ಕೋಚ್‌ಗಳ ಒಳಭಾಗವನ್ನು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಆಧುನಿಕವಾಗಿ ಅಭಿವೃದ್ಧಿಪಡಿಸಲಾಗುವುದು,  ರೈಲುಗಳ ವೇಗವನ್ನು ಹೆಚ್ಚಿಸಲು ಮತ್ತು ಹೆಚ್ಚಿನ ಸ್ಥಳಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಪ್ರಾರಂಭಿಸಲು ರೈಲ್ವೆಯು ಯೋಜಿಸಿರುವುದರಿಂದ ಹಳೆಯ ಹಳಿಗಳನ್ನು ಬದಲಾಯಿಸಲು ಗಮನಾರ್ಹವಾದ ಅನುದಾನ ಹಂಚಿಕೆ ಮಾಡಲಾಗುವುದು ಎಂದರು. 

ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ರೈಲ್ವೆಯು ಇನ್ನೂ 100 ವಿಸ್ಟಾಡೋಮ್ ಕೋಚ್‌ಗಳನ್ನು ತಯಾರಿಸಲು ಮುಂದಾಗಿದೆ. ಬಜೆಟ್‌ನಲ್ಲಿ, 35 ಹೈಡ್ರೋಜನ್ ಇಂಧನ ಆಧಾರಿತ ರೈಲುಗಳು, 4,500 ಹೊಸ ವಿನ್ಯಾಸದ ಆಟೋ ಮೊಬೈಲ್ ಕ್ಯಾರಿಯರ್ ಕೋಚ್ ಗಳು, 5,000 ಎಲ್ ಹೆಚ್ ಬಿ ಬೋಗಿಗಳು ಮತ್ತು 58,000 ವ್ಯಾಗನ್ ತಯಾರಿಕೆಯನ್ನು ಸರ್ಕಾರ ಬಜೆಟ್ ನಲ್ಲಿ ಪ್ರಸ್ತಾಪಿಸಿದೆ.  2022-23ರ ಕೇಂದ್ರ ಬಜೆಟ್‌ನಲ್ಲಿ ರೈಲ್ವೆಗೆ 1.4 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಾಗಿದ್ದು, ಇದರಲ್ಲಿ 1.37 ಲಕ್ಷ ಕೋಟಿ ಬಂಡವಾಳ ವೆಚ್ಚ ಮತ್ತು 3,267 ಲಕ್ಷ ಕೋಟಿ ಆದಾಯ ವೆಚ್ಚಕ್ಕೆ ಮೀಸಲಿಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com