ಕೇಂದ್ರ ಬಜೆಟ್ 2023-24 ಪ್ರಸ್ತಾಪಗಳು ಏಳು ಅಂಶಗಳ ಮೇಲೆ ನಿಂತಿವೆ: ವಿತ್ತ ಸಚಿವೆ ಸೀತಾರಾಮನ್

ನಮ್ಮ ಯುವಕರು, ಮಹಿಳೆಯರು ಮತ್ತು ದಲಿತರ ಅಭಿವೃದ್ಧಿಗೆ ಬದ್ಧತೆ ತೋರುವ ಬಜೆಟ್ ಇದು ಎಂದು ಹೇಳಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಇಂದು ಮಂಡನೆ ಮಾಡಿರುವ ಬಜೆಟ್'ನ 7 ಅಂಶಗಳನ್ನು ಹೆಸರಿಸಿದ್ದಾರೆ.
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
Updated on

ನವದೆಹಲಿ: ಇದು ಅಮೃತಕಾಲದ ಮೊದಲ ಬಜೆಟ್​. ಇದು ಹಿಂದಿನ ಬಜೆಟ್​ಗಳ ದೃಢವಾದ ಅಡಿಪಾಯಗಳ ಮೇಲೆ ಸಿದ್ಧಗೊಂಡಿದೆ. ನಮ್ಮ ಯುವಕರು, ಮಹಿಳೆಯರು ಮತ್ತು ದಲಿತರ ಅಭಿವೃದ್ಧಿಗೆ ಬದ್ಧತೆ ತೋರುವ ಬಜೆಟ್ ಇದು ಎಂದು ಹೇಳಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಇಂದು ಮಂಡನೆ ಮಾಡಿರುವ ಬಜೆಟ್'ನ 7 ಅಂಶಗಳನ್ನು ಹೆಸರಿಸಿದ್ದಾರೆ.

ಏಳು ಅಂಶಗಳು ಇಂತಿವೆ...

  • ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ
  • ಅಂಚಿನಲ್ಲಿರುವವರಿಗೆ ಸವಲತ್ತು
  • ಮೂಲಸೌಕರ್ಯ
  • ಸಾಮರ್ಥ್ಯದ ಸದ್ಬಳಕೆ
  • ಪರಿಸರ ಸ್ನೇಹಿ ಅಭಿವೃದ್ಧಿ
  • ಯುವಶಕ್ತಿಗೆ ಉತ್ತೇಜನ
  • ಆರ್ಥಿಕ ಸುಧಾರಣೆ

ಬಜೆಟ್​ನ ಮೊದಲ ಆಧಾರ ಸ್ತಂಭವಾಗಿರುವ ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಗೆ ಕೇಂದ್ರ ಹಣಕಾಸು ಸಚಿವರು ಹೆಚ್ಚಿನ ಒತ್ತು ನೀಡಿದ್ದು. ಬಹಳಷ್ಟು ಅನುದಾನ ಬಿಡುಗಡೆ ಮಾಡಿದ್ದಾರೆ.

ಕೊವಿಡ್ ಸೇರಿದಂತೆ ಹಲವು ಸವಾಲುಗಳ ನಡುವೆಯೂ ಭಾರತವು ಉಜ್ವಲ ಭವಿಷ್ಯದತ್ತ ಹೆಜ್ಜೆ ಹಾಕುತ್ತಿದೆ. ಇದನ್ನು ವಿಶ್ವಮಟ್ಟದ ಹಲವು ಸಂಸ್ಥೆಗಳು ಗುರುತಿಸಿವೆ. ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಯಾವುದೇ ಭಾರತೀಯರು ಹಸಿವಿನಿಂದ ಬಳಲಲು ಅವಕಾಶ ನೀಡಲಿಲ್ಲ. 80 ಕೋಟಿ ಜನರಿಗೆ ಆಹಾರ ಒದಗಿಸಲಾಯಿತು ಎಂದು ಹೇಳಿದರು.

ಬಜೆಟ್ ಭಾಷಣದ ಆರಂಭದಲ್ಲಿ ಕೇಂದ್ರ ಸರ್ಕಾರದ ವಿವಿಧ ಜನಕಲ್ಯಾಣ ಯೋಜನೆಗಳ ಪ್ರಗತಿಯನ್ನು ನಿರ್ಮಲಾ ಸೀತಾರಾನ್ ಅವರು ವಿವರಿಸಿದರು.

ದೀನ್​ದಯಾಳ್ ಅಂತ್ಯೋದಯ ಯೋಜನೆ, ಕೌಶಲಾಭಿವೃದ್ಧಿ ಯೋಜನೆ, ಮುದ್ರಾ ಸೇರಿದಂತೆ ಹಲವು ಯೋಜನೆಗಳ ಬಗ್ಗೆ ನಿರ್ಮಲಾ ಗಮನ ಸೆಳೆದರು. ಪ್ರಗತಿಯ ಅಂಕಿಅಂಶಗಳನ್ನು ಮಂಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com