ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೇಂದ್ರ ಬಜೆಟ್ 2023: ಹಿರಿಯ ನಾಗರೀಕರಿಗೆ ಸಿಹಿ ಸುದ್ದಿ; ಉಳಿತಾಯಕ್ಕೆ ಹೊಸ ಯೋಜನೆಗಳ ಘೋಷಣೆ

ಕೇಂದ್ರ ಬಜೆಟ್ 2023ರಲ್ಲಿ ​ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. ಬ್ಯಾಂಕ್​ನಲ್ಲಿ ಠೇವಣಿ ಇರಿಸಿ ಬಡ್ಡಿಯ ಆಧಾರದ ಮೇಲೆ ಜೀವನ ಸಾಗಿಸುವ ಹಿರಿಯ ನಾಗರಿಕರಿಗೆ ಇದು ಶುಭ ಸುದ್ದಿಯಾಗಿದೆ.

ನವದೆಹಲಿ: ಕೇಂದ್ರ ಬಜೆಟ್ 2023ರಲ್ಲಿ ​ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. ಬ್ಯಾಂಕ್​ನಲ್ಲಿ ಠೇವಣಿ ಇರಿಸಿ ಬಡ್ಡಿಯ ಆಧಾರದ ಮೇಲೆ ಜೀವನ ಸಾಗಿಸುವ ಹಿರಿಯ ನಾಗರಿಕರಿಗೆ ಇದು ಶುಭ ಸುದ್ದಿಯಾಗಿದೆ.

 2023ನೇ ವರ್ಷದ ಕೇಂದ್ರ ಬಜೆಟ್​ನಲ್ಲಿ ಹಿರಿಯ ನಾಗರಿಕರ ಠೇವಣಿ ಮಿತಿಯನ್ನು 15 ಲಕ್ಷ ರೂಪಾಯಿಯಿಂದ 30 ಲಕ್ಷ ರೂಪಾಯಿಗೆ ಏರಿಸಲಾಗಿದೆ. ಇದರಿಂದಾಗಿ ಹೆಚ್ಚಿನ ಮೊತ್ತವನ್ನು ಠೇವಣಿ ಇರಿಸಲು ಬಯಸುವ ಹಿರಿಯ ನಾಗರಿಕರಿಗೆ ಅನೇಕ ಖಾತೆಗಳನ್ನು ನಿರ್ವಹಿಸುವ ಕೆಲಸ ತಪ್ಪಲಿದೆ. ಠೇವಣಿ ಇಟ್ಟ ಮೊತ್ತಕ್ಕೆ ಗರಿಷ್ಟ ಬಡ್ಡಿಯೂ ಲಭಿಸಿದಂತೆ ಆಗುತ್ತದೆ.

ಠೇವಣಿ ಇಟ್ಟು ಪ್ರತೀ ತಿಂಗಳೂ ಬಡ್ಡಿಯನ್ನು ಆದಾಯದ ರೂಪದಲ್ಲಿ ಪಡೆಯುವ ಹಿರಿಯ ನಾಗರಿಕರಿಗೆ ಈ ಹಿಂದೆ 4.5 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಒಂದು ಖಾತೆಯಲ್ಲಿ ಠೇವಣಿ ಇರಿಸಲು ಸಾಧ್ಯ ಆಗುತ್ತಿರಲಿಲ್ಲ. ಇದೀಗ ಆ ಮಿತಿಯನ್ನು 9 ಲಕ್ಷಕ್ಕೆ ಏರಿಸಲಾಗಿದೆ. ಇನ್ನು ಜಂಟಿ ಖಾತೆಗಳಿಗೆ ಈ ಮಿತಿಯನ್ನು 15 ಲಕ್ಷಕ್ಕೆ ಏರಿಸಲಾಗಿದೆ.

ಈ ಬಾರಿ ಮಹಿಳೆಯರಿಗೆ ಮಹಿಳಾ ಸಮ್ಮಾನ್​ ಉಳಿತಾಯ ಪ್ರಮಾಣಪತ್ರವನ್ನು ಘೋಷಿಸಲಾಗಿದ್ದು ಈ ಯೋಜನೆಯ ಅಡಿಯಲ್ಲಿ ಎರಡು ವರ್ಷದ ಅವಧಿಗೆ ಶೇ.7.5 ಬಡ್ಡಿದರದೊಂದಿಗೆ 2 ಲಕ್ಷ ರೂ.ಯನ್ನು ಹೂಡುವ ಅವಕಾಶ ನೀಡಲಾಗಿದೆ. ಈ ಯೋಜನೆಯ ಅಡಿಯಲ್ಲಿ ಮಹಿಳೆಯರು ಅಥವಾ ಹೆಣ್ಣುಮಕ್ಕಳು ಫಲವನ್ನು ಪಡೆಯಬಹುದಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com