ಸಿಂಡಿಕೇಟ್ ಬ್ಯಾಂಕ್‌ಗೆ ರು. 316 ಕೋಟಿ ನಿವ್ವಳ ಲಾಭ

ಕೇಂದ್ರ ಸರ್ಕಾರಿ ಸ್ವಾಮ್ಯದ ಸಿಂಡಿಕೇಟ್ ಬ್ಯಾಂಕ್ ಪ್ರಸಕ್ತ ತ್ರೈಮಾಸಿಕದಲ್ಲಿ ರು. 316 ಕೋಟಿ ನಿವ್ವಳ ಲಾಭ ಗಳಿಸಿದೆ.
ಸಾಂದರ್ಭಿಕ ಚಿತ್ರ- ಸಿಂಡಿಕೇಟ್ ಬ್ಯಾಂಕ್
ಸಾಂದರ್ಭಿಕ ಚಿತ್ರ- ಸಿಂಡಿಕೇಟ್ ಬ್ಯಾಂಕ್

ಬೆಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ಸಿಂಡಿಕೇಟ್ ಬ್ಯಾಂಕ್ ಪ್ರಸಕ್ತ ತ್ರೈಮಾಸಿಕದಲ್ಲಿ ರು. 316 ಕೋಟಿ ನಿವ್ವಳ ಲಾಭ ಗಳಿಸಿದೆ.

ಆದರೆ ಕಳೆದ ತ್ರೈಮಾಸಿಕದಲ್ಲಿ ಅನುಭವಿಸಿದ್ದ ನಷ್ಟದ ಪರಿಣಾಮವಾಗಿ ಅರ್ಧವಾರ್ಷಿಕದ ಆರ್ಥಿಕ ಬೆಳವಣಿಗೆ ನೋಡಿದಾಗ ಲಾಭ ಕಳೆದ ಸಾಲಿಗಿಂತ ಶೇ. 13.12ರಷ್ಟು ಇಳಿಕೆಯಾಗಿದೆ. ಲಾಭವು ಹಿಂದಿನ ಸಾಲಿಗಿಂತ ರು. 121 ಕೋಟಿಯಷ್ಟು ಕಡಿಮೆಯಾಗಿದೆ. ಆದಾಗ್ಯೂ ಕಳೆದ ಸಾಲಿನ ಎರಡನೇ ತ್ರೈಮಾಸಿಕಕ್ಕಿಂತ ಲಾಭದಲ್ಲಿ ಶೇ.18ರಷ್ಟು ಏರಿಕೆಯಾಗಿದ್ದು, ಕಾರ್ಯಾಚರಣೆ ಲಾಭವು ರು. 954 ಕೋಟಿಯಾಗಿದೆ. ಈ ತ್ರೈಮಾಸಿಕದಲ್ಲಿ ಕೆಲ ಸಮಸ್ಯೆಗಳು ಎದುರಾದರೂ ಬ್ಯಾಂಕ್ ಚೇತರಿಕೆಯ ಫಲಿತಾಂಶ ನೀಡಿದೆ. ಮುಂದಿನ ತ್ರೈಮಾಸಿಕದಲ್ಲಿ ಇನ್ನಷ್ಟು ಸುಧಾರಣೆ ಕಾಣುವ ಭರವಸೆಯಿದೆ ಎಂದು ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಎಂ. ಆಂಜನೇಯ ಪ್ರಸಾದ್ ತಿಳಿಸಿದ್ದಾರೆ.

ಬ್ಯಾಂಕ್‌ನ ಒಟ್ಟಾರೆ ವ್ಯವಹಾರದಲ್ಲಿಯೂ ಶೇ.20 ರಷ್ಟು ವೃದ್ಧಿಯಾಗಿ ರು. 4.15 ಲಕ್ಷ ಕೋಟಿಗೆ ಏರಿದೆ. ಭಾರತದಲ್ಲಿ ಶೇ. 23 ರಷ್ಟು ಏರಿಕೆ ಕಂಡು ರು. 3.54 ಲಕ್ಷ ಕೋಟಿ ವ್ಯವಹಾರ ನಡೆಸಲಾಗಿದೆ. ಜಾಗತಿಕ ಠೇವಣಿ ರು. 2.39 ಲಕ್ಷ ಕೋಟಿ ಹಾಗೂ ಸ್ಥಳೀಯ ಠೇವಣಿ ರು. 2.13 ಲಕ್ಷ ಕೋಟಿಗೆ ಏರಿದೆ. ಜಾಗತಿಕ ಹಾಗೂ ಸ್ಥಳೀಯ ಸಾಲ ನೀಡಿಕೆಯಲ್ಲಿಯೂ ಏರಿಕೆಯಾಗಿದ್ದು ಕ್ರಮವಾಗಿ ರು. 1.76 ಲಕ್ಷ ಕೋಟಿ ಹಾಗೂ ರು. 1.40 ಲಕ್ಷ ಕೋಟಿಯಾಗಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com