28 ಸಾವಿರ ಗಡಿ ದಾಟಿದ ಸೆನ್ಸೆಕ್ಸ್

ಸಾಂದರ್ಭಿಕ ಚಿತ್ರ- ಸೆನ್ಸೆಕ್ಸ್
ಸಾಂದರ್ಭಿಕ ಚಿತ್ರ- ಸೆನ್ಸೆಕ್ಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ವಿದೇಶಿ ಹೂಡಿಕೆದಾರರು ಷೇರು ಖರೀದಿಗೆ ಆಸಕ್ತಿ ತೋರಿದ್ದರಿಂದ ಷೇರುಮಾರುಕಟ್ಟೆ ಆರಂಭಗೊಳ್ಳುತ್ತಿದ್ದಂತೆ ಸೆನ್ಸೆಕ್ಸ್ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ.

ಇಂದು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ(ಬಿಎಸ್ಇ) ಮತ್ತು ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ(ಎನ್ಎಸ್ಇ) ಗಣನಿಯ ಸಾಧನೆ ಮಾಡಿದೆ. ಬಿಎಸ್ಇ ಸೂಚ್ಯಂಕ 159 ಅಂಶಗಳಷ್ಟು ಭಾರಿ ಏರಿಕೆ ಕಂಡಿದ್ದು, 28,027.96 ದ ಗಡಿ ದಾಟಿದೆ. ನಿಫ್ಟಿ ಕೂಡ 8,383.05ಕ್ಕೆ ಏರಿಕೆಯಾಗಿದೆ. ಹೂಡಿಕೆದಾರರು ಲೋಹ, ಅನಿಲ ಮತ್ತು ಗ್ಯಾಸ್, ಗ್ರಾಹಕ ಬೆಳೆಬಾಳುವ ಉತ್ಪನ್ನಗಳು ಹೆಚ್ಚು ಖರೀದಿ ಕ್ಷೇತ್ರಗಳಾಗಿವೆ.

ಪ್ರಧಾನಿ ನರೇಂದ್ರ ಮೋದಿ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಷೇರುಪೇಟೆಗೆ ವಿದೇಶಿ ಹೂಡಿಕೆ ಹರಿದುಬರುತ್ತಿದ್ದು, ಸೂಚ್ಯಂಕ ದಿಢೀರ್ ಏರಿಕೆಯಾಗಲು ಪ್ರಮುಖ ಕಾರಣ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಮತ್ತೊಂದೆಡೆ, ಅಮೆರಿಕನ್ ಡಾಲರ್ ಎದುರು ರುಪಾಯಿ ಸಹ ಚೇತರಿಕೆ ಕಂಡಿದೆ. ಡಾಲರ್ ಎದುರು ರುಪಾಯಿ 17 ಪೈಸೆ ಹೆಚ್ಚಳವಾಗಿದೆ. ಆ ಮೂಲಕ ರು. 61.45ಕ್ಕೆ ತಲುಪಿದೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com