
ಮುಂಬೈ: ಭಾರತೀಯ ಷೇರುಮಾರುಕಟ್ಟೆ ಬುಧವಾರ ಮತ್ತೆ ದಾಖಲೆ ಏರಿಕೆ ಕಂಡಿದ್ದು, ಬಿಎಸ್‌ಇ ಸೆನ್ಸೆಕ್ಸ್ 28, 051, 78 ಅಂಶಗಳಿಗೆ ಏರಿಕೆ ಕಂಡಿದೆ.
ನಿಫ್ಟಿ ಕೂಡ ದಾಖಲೆ ಪ್ರಮಾಣದ ಅಂಶಗಳನ್ನು ಏರಿಕೆ ಮಾಡಿಕೊಂಡಿದ್ದು, 8, 394.95 ಅಂಶಗಳಿಗೇರಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಂಡು ಸಕಾರಾತ್ಮರ ಅಂಶಗಳು ಭಾರತೀಯ ಷೇರುಮಾರುಕಟ್ಟೆಗೆ ವರದಾನವಾಗಿ ಪರಿಣಮಿಸಿದ್ದು, ವಿಶ್ವ ವಾಣಿಜ್ಯ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚೆಚ್ಚು ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿರುವುದರಿಂದ ಕಳೆದ ಒಂದು ವಾರದಿಂದ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಬೆಳವಣಿಗೆಗಳು ಕಂಡುಬರುತ್ತಿವೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಹೀಗಾಗಿಯೇ ಷೇರು ಸೂಚ್ಯಂಕ 41.43 ಅಂಶಗಳನ್ನು ಏರಿಕೆ ಮಾಡಿಕೊಂಡಿದೆ. ಅಂತೆಯೇ ಬಿಎಸ್‌ಇ ಸೆನ್ಸೆಕ್ಸ್ 28,051.78ಗಳಿಗೆ ಏರುವ ಮೂಲಕ ಈ ಹಿಂದಿನ ದಾಖಲೆಯಾದ 28,027.96ಯನ್ನು ಹಿಂದಿಕ್ಕಿದೆ. ಈ ಬೆಳವಣಿಗೆಗಳಿಂದಾಗಿ ಬಹುತೇಕ ವಿಭಾಗಗಳು ಲಾಭಾಂಶವನ್ನು ಕಂಡಿದ್ದು, ಬ್ಯಾಂಕಿಂಗ್ ಮತ್ತು ವಾಹನ ವಿಭಾಗ ಹೆಚ್ಚಿನ ವಿಭಾಗದ ಲಾಭಾಂಶ ಕಂಡಿದೆ. ಆದರೆ ಉಕ್ಕಿನ ವಿಭಾಗದಲ್ಲಿ ಕೊಂಚ ಆಂತಕ ಸೃಷ್ಟಿಯಾಗಿದ್ದು, ಕಬ್ಬಿಣದ ಉದ್ಯಮ ಬಂಡವಾಳದಾರರು ಷೇರುಗಳನ್ನು ಮಾರಲು ಮುಂದಾಗಿದ್ದರಿಂದ ಈ ವಿಭಾಗದಲ್ಲಿ ಕೊಂಚ ನಷ್ಟವಾಗಿದೆ.
Advertisement