ಚಿನ್ನ
ವಾಣಿಜ್ಯ
ಮದುವೆ ಸೀಸನ್ : ಬಂಗಾರದ ಬೆಲೆ ರು.130 ಏರಿಕೆ
ಮದುವೆ ಸೀಸನ್ ಪ್ರಭಾವ ಹಿನ್ನೆಲೆಯಲ್ಲಿ ದಾಸ್ತಾನುಗಾರರು ಖರೀದಿಗೆ ಮುಗಿಬಿದ್ದಿರುವುದರಿಂದ ಚಿನ್ನದ...
ಮುಂಬೈ: ಮದುವೆ ಸೀಸನ್ ಪ್ರಭಾವ ಹಿನ್ನೆಲೆಯಲ್ಲಿ ದಾಸ್ತಾನುಗಾರರು ಖರೀದಿಗೆ ಮುಗಿಬಿದ್ದಿರುವುದರಿಂದ ಚಿನ್ನದ ಬೆಲೆಯಲ್ಲಿ ರು. 130 ಮತ್ತು ಬೆಳ್ಳಿ ದರದಲ್ಲಿ 100 ರು. ಏರಿಕೆಯಾಗಿದೆ.
ಮದುವೆ ಸೀಸನ್ ಡಿಮ್ಯಾಂಡ್‌ನಿಂದಾಗಿ ಚಿನ್ನ ಬೆಳ್ಳಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಕಂಡು ಬಂದರೂ ಸಾಗರೋತ್ತರ ದೇಶಗಳಲ್ಲಿ ಬಂಗಾರದ ಬೆಲೆ ಕುಸಿತಗೊಂಡಿದೆ.
ದೆಹಲಿಯಲ್ಲಿ 99.9 ಮತ್ತು 99.5 ಶೇ ಶುದ್ಧ ಚಿನ್ನದ ಬೆಲೆಯಲ್ಲಿ ರು.130 ಏರಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆ ಕ್ರಮವಾಗಿ ರು. 26,930 ಮತ್ತು ರು. 26,730 ಆಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ