ಇಲ್ಲಿ ಮೊಬೈಲ್ ತುಟ್ಟಿ

'ಹೊಟ್ಟಿಗೆ ಹಿಟ್ಟಿಲ್ದಿದ್ರೂ ಜುಟ್ಟಿಗೆ ಮಲ್ಲಿಗೆ ಹೂ' ಎನ್ನುವ ಕಾಲ ಹಳತಾಯ್ತು. ಈಗ ಹೊಟ್ಟೆಗೆ...
ಮೊಬೈಲು (ಸಾಂದರ್ಭಿಕ ಚಿತ್ರ )
ಮೊಬೈಲು (ಸಾಂದರ್ಭಿಕ ಚಿತ್ರ )

'ಹೊಟ್ಟಿಗೆ ಹಿಟ್ಟಿಲ್ದಿದ್ರೂ ಜುಟ್ಟಿಗೆ ಮಲ್ಲಿಗೆ ಹೂ' ಎನ್ನುವ ಕಾಲ ಹಳತಾಯ್ತು. ಈಗ ಹೊಟ್ಟೆಗೆ ರೊಟ್ಟಿ ಇಲ್ದಿದ್ರೂ ಕೈಲೊಂದು ಮೊಬೈಲು ಅನ್ನುವ ಕಾಲ.

ಹೊಸ ಸರ್ವೇ ಪ್ರಕಾರ, ಭಾರತೀಯರು ಅಮೆರಿಕನ್ನರಿಗಿಂತ ತಲಾ ಹೆಚ್ಚು  ಹಣವನ್ನು ಮೊಬೈಲ್‌ಗಾಗಿ ವ್ಯಯಿಸುತ್ತಿದ್ದಾರೆ. ಮೊಬೈಲ್‌ಗಾಗಿ ಹೆಚ್ಚು ತಲಾದಾಯ ವೆಚ್ಚ ಮಾಡುವ ರಾಷ್ಟ್ರಗಳಲ್ಲಿ ಭಾರತ 83ನೇ ಸ್ಥಾನದಲ್ಲಿದೆ. ಅಂದ್ರೆ, ಭಾರತಕ್ಕೂ ಮೊದಲಿನ 82 ಸ್ಥಾನಗಳಲ್ಲಿರುವ ದೇಶಗಳಲ್ಲಿ ಸೆಲ್‌ಫೋನ್ ಬಳಕೆಗಾಗಿ ವ್ಯಯವಾಗುವ ಹಣ ಇಲ್ಲಿಗಿಂತ ಕಡಿಮೆ. ಈ ಮೊದಲಿನ ದೇಶಗಳಲ್ಲಿ ಅಮೆರಿಕ, ಹಾಂಗಾಂಗ್, ಚೀನಾ, ಸಿಂಗಾಪುರ, ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್ ಮುಂತಾದವು ಇವೆ.


ಇದು ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ ಸಿದ್ಧಪಡಿಸಿದ ವರದಿಯಲ್ಲಿ ಗೊತ್ತಾದ ಅಂಶ. ಭಾರತೀಯರು ತಮ್ಮ ಒಟ್ಟು ರಾಷ್ಟ್ರೀಯ ಉತ್ಪನ್ನದ ಶೇ. 2.23ನ್ನು ಮೊಬೈಲ್‌ಗಾಗಿ ಕಳೆಯುತ್ತಿದ್ದಾರೆ. ಇದು, ಭಾರತೀಯರ ಮೊಬೈಲ್ ಬಳಕೆ ಹೆಚ್ಚು ಎಂಬುದನ್ನೇನೂ ಸೂಚಿಸುತ್ತಿಲ್ಲ. ಬದಲಾಗಿ, ಆ ಇತರೆ ದೇಶಗಳಿಗಿಂತ ಇಲ್ಲಿ ಮೊಬೈಲ್ ದರಗಳು ತುಟ್ಟಿ ಎಂಬುದನ್ನೇ ಸೂಚಿಸುತ್ತಿವೆ. ಚೀನಾ ಕೂಡಾ ಶೇ. 0.78 ಉತ್ಪನ್ನ ವೆಚ್ಚ ಮಾಡುತ್ತ 28ನೇ ಸ್ಥಾನದಲ್ಲಿದೆ.

ಬ್ರಾಡ್ ಬ್ಯಾಂಡ್ ಸೇವೆಗಳಲ್ಲಿ ಕೂಡಾ ಭಾರತ ತುಟ್ಟಿ. ಅದು 81ನೇ ಸ್ಥಾನದಲ್ಲಿದೆ. ಪ್ರಿಪೇಯ್ಡ್ ಮೊಬೈಲ್ ಸೇವೆಯಲ್ಲಿ ಜಗತ್ತಿನ ಸರಾಸರಿ 4 ಶೇಕಡದಷ್ಟಿದ್ದರೆ, ಭಾರತದ್ದು ಶೇ. 6.2ರ ಆಸುಪಾಸಿನಲ್ಲಿದೆ. ಇನ್ನು ಪೋಸ್ಟ್  ಪೇಯ್ಡ್ ಸೇವೆಯಲ್ಲಂತೂ ನಮ್ಮ ಸ್ಥಾನ 92. ಚೀನಾ ನಮಗಿಂತ ಮೇಲೆ, 63ರಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com