ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ಆಪಲ್ ಸಂಸ್ಥೆಗೆ ಆಹ್ವಾನ

'ಡಿಜಿಟಲ್ ಭಾರತ' ಪ್ರಚಾರವನ್ನು ಅನುಷ್ಟಾನಗೊಳಿಸುವತ್ತ ಹೆಜ್ಜೆ ಹಾಕಿರುವ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್
ಆಪಲ್ ಸಂಸ್ಥೆಯ ಅಧಿಕಾರಿ ಜಾನ್ ರೆಯ್ನಾಲ್ಡ್ಸ್ ಜೊತೆಗೆ ರವಿಶಂಕರ್ ಪ್ರಸಾದ್ ಭೇಟಿ
ಆಪಲ್ ಸಂಸ್ಥೆಯ ಅಧಿಕಾರಿ ಜಾನ್ ರೆಯ್ನಾಲ್ಡ್ಸ್ ಜೊತೆಗೆ ರವಿಶಂಕರ್ ಪ್ರಸಾದ್ ಭೇಟಿ

ನವದೆಹಲಿ: 'ಡಿಜಿಟಲ್ ಭಾರತ' ಪ್ರಚಾರವನ್ನು ಅನುಷ್ಟಾನಗೊಳಿಸುವತ್ತ ಹೆಜ್ಜೆ ಹಾಕಿರುವ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ಆಪಲ್ ಸಂಸ್ಥೆಗೆ ಆಹ್ವಾನ ನೀಡಿದ್ದಾರೆ.

ಆಪಲ್ ಸಂಸ್ಥೆಯ ಅಧಿಕಾರಿ ಜಾನ್ ರೆಯ್ನಾಲ್ಡ್ಸ್ ಅವರನ್ನು ಶುಕ್ರವಾರ ಭೇಟಿ ಮಾಡಿದ ಪ್ರಸಾದ್ ಕ್ಯುಪರ್ಟಿನೋ ಮೂಲದ ಈ ಸಂಸ್ಥೆಗೆ ತನ್ನ ಇರುವಿಕೆಯನ್ನು ದೇಶದಲ್ಲಿ ವಿಸ್ತರಿಸುವಂತೆ ಹೇಳಿದ್ದಾರೆ.

"ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಇಲ್ಲದೆಯೂ ಆಪಲ್ ಭಾರದಲ್ಲಿ ಭದ್ರ ಸ್ಥಾನ ಹೊಂದಿದೆ. ಇನ್ನು ಹೆಚ್ಚು ವಿಸ್ತರಣೆ ಮಾಡಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ಮನವಿ ಮಾಡಿದ್ದೇನೆ" ಎಂದು ಪ್ರಸಾದ್ ತಿಳಿಸಿದ್ದಾರೆ.

ಈಗ ಸದ್ಯಕ್ಕೆ ನೀಡುತ್ತಿರುವ ಸೌಲಭ್ಯಗಳ ಜೊತೆಗೆ ಇನ್ನು ಹೆಚ್ಚಿನ ಸವಲತ್ತುಗಳನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದು ಪ್ರಸಾದ್ ತಿಳಿಸಿದ್ದಾರೆ. ಅಲ್ಲದೆ ರಾಜ್ಯ ಸರ್ಕಾರಗಳಿಂದಲು ಸೌಲಭ್ಯಗಳು ದೊರಕಲಿವೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com