ಅಕ್ಟೋಬರ್‍ವರೆಗೂ ಈರುಳ್ಳಿ ದರ ಗಗನಮುಖಿ

ಅಕಾಲಿಕ ಮಳೆ ಮತ್ತು ಉತ್ಪಾದನೆಯಲ್ಲಾದ ಇಳಿಕೆಯು ಈರುಳ್ಳಿ ದರವನ್ನು ಗಗನಮುಖಿಯಾಗಿಸಿದೆ. ಈರುಳ್ಳಿ ದರವು ದಿನೇ ದಿನೆ ಏರಿಕೆಯಾಗುತ್ತಿದ್ದು, ದೇಶಾದ್ಯಂತ ಮುಂದಿನ ಬೆಳೆಯು ಮಾರುಕಟ್ಟೆ ತಲುಪುವವರೆಗೂ ಅಂದರೆ ಅಕ್ಟೋಬರ್‍ವರೆಗೂ ದರ ಏರಿಕೆ ಮುಂದುವರಿಯಲಿದೆ...
ಅಕ್ಟೋಬರ್‍ವರೆಗೂ ಈರುಳ್ಳಿ ದರ ಗಗನಮುಖಿ (ಸಂಗ್ರಹ ಚಿತ್ರ)
ಅಕ್ಟೋಬರ್‍ವರೆಗೂ ಈರುಳ್ಳಿ ದರ ಗಗನಮುಖಿ (ಸಂಗ್ರಹ ಚಿತ್ರ)

ನವದೆಹಲಿ: ಅಕಾಲಿಕ ಮಳೆ ಮತ್ತು ಉತ್ಪಾದನೆಯಲ್ಲಾದ ಇಳಿಕೆಯು ಈರುಳ್ಳಿ ದರವನ್ನು ಗಗನಮುಖಿಯಾಗಿಸಿದೆ. ಈರುಳ್ಳಿ ದರವು ದಿನೇ ದಿನೆ ಏರಿಕೆಯಾಗುತ್ತಿದ್ದು, ದೇಶಾದ್ಯಂತ ಮುಂದಿನ ಬೆಳೆಯು ಮಾರುಕಟ್ಟೆ ತಲುಪುವವರೆಗೂ ಅಂದರೆ ಅಕ್ಟೋಬರ್‍ವರೆಗೂ ದರ ಏರಿಕೆ ಮುಂದುವರಿಯಲಿದೆ.

2014-15ರ ವಿತ್ತೀಯ ವರ್ಷದಲ್ಲಿ 2 ಕೋಟಿ ಟನ್ ಈರುಳ್ಳಿ ಉತ್ಪಾದನೆಯಾಗಿದೆ. ಈ ಪೈಕಿ ಶೇ.30-35ರಷ್ಟು ಫೆಬ್ರವರಿಯಿಂದ ಏಪ್ರಿಲ್‍ನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ನಾಶವಾಗಿ ಹೋಗಿದೆ ಎಂದು ಮುಂಬೈನ ಸಗಟು ಈರುಳ್ಳಿ ವ್ಯಾಪಾರಿಗಳ ಒಕ್ಕೂಟ ತಿಳಿಸಿದೆ.

``ಪೂರೈಕೆ ಕೊರತೆ ಉಂಟಾಗದಂತೆ ಈರುಳ್ಳಿಯನ್ನು ದಾಸ್ತಾನು ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಜತೆಗೆ, ರಫ್ತಿಗೆ ಮಿತಿ ಹೇರುವಲ್ಲೂ ವಿಳಂಬ ಮಾಡಿದ್ದಾರೆ. ಪ್ರತಿ ವರ್ಷ ಈರುಳ್ಳಿ ದರ ಏರಿಕೆಯಾಗಲು ಇದೇ ಪ್ರಮುಖ ಕಾರಣ'' ಎಂದು ಬೆಂಗಳೂರು ಕೃಷಿ ಮಾರುಕಟ್ಟೆಯ ಸಗಟು ವ್ಯಾಪಾರಸ್ಥ ಶ್ರೀನಿವಾಸ ಗೌಡ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com