ಷೇರುಪೇಟೆ ಮತ್ತೆ ಕುಸಿತ

ಹೂಡಿಕೆದಾರರ ಷೇರು ಮಾರಾಟದಿಂದಾಗಿ ಮಂಗಳವಾರ ಷೇರುಪೇಟೆ ವಹಿವಾಟು ಮತ್ತೆ 298 ಅಂಕ ದಿಢೀರ್ ಕುಸಿತ ಕಂಡುಬಂದಿದ್ದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಹೂಡಿಕೆದಾರರ ಷೇರು ಮಾರಾಟದಿಂದಾಗಿ ಮಂಗಳವಾರ ಷೇರುಪೇಟೆ ವಹಿವಾಟು ಮತ್ತೆ 298 ಅಂಕ ದಿಢೀರ್ ಕುಸಿತ ಕಂಡುಬಂದಿದ್ದು, ನಿಫ್ಟಿ ಸಹ 85 ಅಂಕ ಕುಸಿತ ಕಂಡುಬಂದಿದೆ.

ದೇಶದ ಒಟ್ಟಾರೆ ಆರ್ಥಿಕ ಅಭಿವೃದ್ಧಿಯ ದರ ಕಳೆದ ತ್ರೈ ಮಾಸಿಕ ಅವಧಿಯಲ್ಲಿ ಕುಸಿತ ಕಂಡುಬಂದಿರುವುದು ಕೂಡ ಷೇರುಮಾರುಕಟ್ಟೆಯಲ್ಲಿನ ಇಂದಿನ ಫಲಿತಾಂಶಕ್ಕೆ ಕಾರಣವಾಗಿದೆ. ಹೂಡಿಕೆದಾರರು ಹೂಡಿಕೆ ಮಾಡಲು ಹಿಂಜರಿಯುತ್ತಿದ್ದಾರೆ.ಚೀನಾದ ಮುಂದುವರಿದಿರುವ ಆರ್ಥಿಕ ಹಿಂಜರಿಕೆ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯೂ ಇನ್ನಿತರ ಕಾರಣಗಳು.

ಷೇರು ಮಾರುಕಟ್ಟೆಯ ಇತ್ತೀಚಿನ ವರದಿ ಬಂದಾಗ, ಮುಂಬೈ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ 222 ಅಂಕ ಕುಸಿತ ಕಂಡುಬಂದು 26 ಸಾವಿರದ 64ರಲ್ಲಿತ್ತು, ನಿಫ್ಟಿ 72 ಅಂಕ ಕುಸಿತ ಕಂಡುಬಂದು 7 ಸಾವಿರದ 896ಲ್ಲಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com