
ಮುಂಬೈ: ಪ್ರಮುಖ ಮೊಬೈಲ್ ಸೇವಾ ಸಂಸ್ಥೆ ವೊಡಾಫೋನ್ ಇಂಡಿಯಾದ ನೂತನ ಸಿಒಒ ಆಗಿ ನವೀನ್ ಛೋಪ್ರಾ ಆಯ್ಕೆಯಾಗಿದ್ದಾರೆ.
ಇಂದು ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬಿದ್ದಿದ್ದು, ಸದ್ಯ ಸಿಒಒ ಆಗಿರುವ ಸುನೀಲ್ ಸೂದ್ ಅವರ ಸ್ಥಾನಕ್ಕೆ ವೋಡಾಫೋನ್ ಬಿಸಿನಸ್ ಸರ್ವೀಸ್ ನಿರ್ದೇಶಕರಾಗಿರುವ ಛೋಪ್ರಾ ನೇಮಕಗೊಂಡಿದ್ದಾರೆ. ನವೀನ್ ಛೋಪ್ರಾ ಅವರು ಇದೇ ಏಪ್ರಿಲ್ 1 ರಿಂದ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
2004 ರಲ್ಲಿ ವೋಡಾಫೋನ್ ಕಾರ್ಪೊರೇಟ್ ಮಾರ್ಕೆಟಿಂಗ್ ಉಪಾಧ್ಯಕ್ಷರಾಗಿ ಸೇರಿದ್ದ ಛೋಪ್ರಾ ಕಳೆದ ಹತ್ತು ವರ್ಷಗಳಲ್ಲಿ ಕಂಪನಿಯ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಸಿಒಒ ಆಗಿದ್ದ ಸುನೀಲ್ ಸೂದ್ ಅವರಿಗೆ ಕಂಪನಿಯ ಮುಖ್ಯಸ್ಥರ ಜವಾಬ್ದಾರಿ ನೀಡಲಾಗಿದ್ದು, ಛೋಪ್ರಾ ಸಿಒಒ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಛೋಪ್ರಾ ಸ್ಥಾನಕ್ಕೆ ಯಾರು ನೇಮಕವಾಗಿದ್ದಾರೆ ಎಂಬುದನ್ನು ಸಂಸ್ಥೆ ಇನ್ನೂ ಬಹಿರಂಗ ಪಡಿಸಿಲ್ಲ.
Advertisement