ತೆರಿಗೆ ಹಣ ಪಾವತಿ ವಿಳಂಬ ಸಾಧ್ಯತೆ

ಈ ಬಾರಿ ನೀವು ಕಾಯುತ್ತಿರುವ ಆದಾಯ ತೆರಿಗೆ ಮರುಪಾವತಿ ತಡವಾಗುವ ಸಾಧ್ಯತೆ ಇದೆ...
ತೆರಿಗೆ ಪಾವತಿ (ಸಂಗ್ರಹ ಚಿತ್ರ)
ತೆರಿಗೆ ಪಾವತಿ (ಸಂಗ್ರಹ ಚಿತ್ರ)

ನವದೆಹಲಿ: ಈ ಬಾರಿ ನೀವು ಕಾಯುತ್ತಿರುವ ಆದಾಯ ತೆರಿಗೆ ಮರುಪಾವತಿ ತಡವಾಗುವ ಸಾಧ್ಯತೆ ಇದೆ. ಆಯವ್ಯಯದಲ್ಲಿ ಆದಾಯ ಮಿತಿಯನ್ನು ತಲುಪಬೇಕಾಗಿರುವ ಹಿನ್ನೆಲೆಯಲ್ಲಿ ಈ ಮರುಪಾವತಿ ವಿಳಂಬವಾಗುವ ನಿರೀಕ್ಷೆ ಇದೆ.

ಮುಂದಿನ ವಿತ್ತೀಯ ವರ್ಷದಲ್ಲಿ ಇದು ಪಾವತಿಯಾಗಬಹುದು. ಸರ್ಕಾರದ ಮೂಲಗಳ ಪ್ರಕಾರ ಮುಂದಿನ ತ್ರೈಮಾಸಿಕ  ಅವಧಿಯಲ್ಲಿ ಎಂದರೆ ಜೂನ್ 2015ರ ಅವಧಿಯಲ್ಲಿ ಪಾವತಿ ಆಗುವ ಸಾಧ್ಯತೆ ಇದೆ. ನಿರೀಕ್ಷಿತ ಆದಾಯದ ಮೇಲೆ ಕಾರ್ಪೋರೇಟ್ ಕಂಪನಿಗಳು ಈಗಾಗಲೇ ಹೆಚ್ಚುವರಿ ತೆರಿಗೆಯನ್ನು ಪಾವತಿಸಿವೆ. ವಿತ್ತೀಯ ವರ್ಷದ  ವೇಳೆಗೆ ಆ ಕಂಪನಿಗಳ ಖಚಿತ ಆದಾಯ ಘೋಷಣೆ ಆಗಲಿದೆ. ಇದರಿಂದಾಗಿ ತೆರಿಗೆ ಪಾವತಿ ಕುರಿತಂತೆ ಲೆಕ್ಕಾಚಾರಕ್ಕೆ ಕೊಂಚ ಸಮಯಾವಕಾಶ ಬೇಕಾಗುತ್ತದೆ.

ನಿರೀಕ್ಷಿತ ಆಯವ್ಯಯದ ಗುರಿ ಮತ್ತು ನೈಜ ಸಂಗ್ರಹದಲ್ಲಿ ಸಾಕಷ್ಟು ಅಂತರ ಇದೆ. ಅದೇ ರೀತಿ ಆರ್ಥಿಕ ಪ್ರಗತಿ ಮಂದಗತಿಯಲ್ಲಿ ಸಾಗಿರುವ ಕಾರಣದಿಂದ ಆದಾಯ ಇಲಾಖೆ ಅಧಿಕಾರಿಗಳು, ಈ ವಿತ್ತೀಯ ವರ್ಷದ ತೆರಿಗೆ ಪಾವತಿ ಯನ್ನು ಕೊಂಚ ವಿಳಂಬ ಮಾಡಿ ಪಾವತಿಸಲು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ನೇರ ತೆರಿಗೆ ಆದಾಯದ ಮೂಲಗಳಾದ, ಕಾರ್ಪೊರೇಟ್ ಆದಾಯ ತೆರಿಗೆ, ವೈಯಕ್ತಿಕ ಆದಾಯ ತೆರಿಗೆ ಮತ್ತು ಸಂಪತ್ತಿನ ತೆರಿಗೆ ಮೂಲಕ ಸರ್ಕಾರ ಕಳೆದ ವರ್ಷ ರು 6.36 ಲಕ್ಷ ಕೋಟಿ ಸಂಗ್ರಹಿಸಿತ್ತು. ಈ ಬಾರಿ ಇದರ ಮೊತ್ತ ಶೇ. 15ರಷ್ಟು ವೃದ್ಧಿಯಾಗಬೇಕು ಎಂದು ಆಯವ್ಯಯದಲ್ಲಿ ನಿರೀಕ್ಷಿಸಲಾಗಿದ್ದು, ಅದರ ಪ್ರಕಾರ ರು.7.36 ಲಕ್ಷ ಕೋಟಿ ಮೊತ್ತದ ಗುರಿ ತಲುಪಬೇಕಾಗಿದೆ.

ಜನವರಿ ಅಂತ್ಯದವರೆಗೆ ಸರ್ಕಾರ ಶೇ. 70ರಷ್ಟು ಮೊತ್ತವನ್ನು ಅಂದರೆ, ರು5.78715 ಕೋಟಿಯನ್ನಷ್ಟೇ ನೇರತೆರಿಗೆಯಿಂದ ಸಂಗ್ರಹಿಸಲು ಸಾಧ್ಯವಾಗಿದೆ. ಇದೇ ಕಾರಣದಿಂದ ಸರ್ಕಾರ ವೆಚ್ಚಗಳಿಗಾಗಿ ನಿಧಿಯನ್ನು ಹೊಂದಿಸಬೇಕಾಗುತ್ತದೆ. ಇದು ಸಹ ತೆರಿಗೆ ಮರುಪಾವತಿ ವಿಳಂಬಕ್ಕೆ ಕಾರಣವಾಗಲಿದೆ. ಭಾರತದಲ್ಲಿ ಇರುವ ತೆರಿಗೆ ಪಾವತಿದಾರರ ಸಂಖ್ಯೆ 34 ಲಕ್ಷ ಇದೆ. ಕೇಂದ್ರ ನಿವ್ವಳ ತೆರಿಗೆ ವರಮಾನ ಪೂರ್ಣ ವರ್ಷದ ಪ್ರಗತಿ ಶೇ.17.7 ನಿರೀಕ್ಷಿಸಲಾಗಿದ್ದು, ಅದರಲ್ಲಿ ಡಿಸೆಂಬರ್ 2014ರವರೆಗೆ ಶೇ.7 ಪ್ರಗತಿ ಸಾಧ್ಯವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com