ಪ್ರಸವ ವಿಮೆ

ಕೆಲವು ವರ್ಷದಿಂದೀಚೆಗೆ ಬೆಳೆದ ಹೆರಿಗೆ ವಿಮೆ ಪರಿಕಲ್ಪನೆಯು ಭಾರತದಲ್ಲಿ ಈಗಷ್ಟೇ ಪ್ರಚಾರಕ್ಕೆ ಬರುತ್ತಿದೆ...
ಹೆರಿಗೆ ವಿಮೆ (ಸಾಂದರ್ಭಿಕ ಚಿತ್ರ)
ಹೆರಿಗೆ ವಿಮೆ (ಸಾಂದರ್ಭಿಕ ಚಿತ್ರ)

ಕೆಲವು ವರ್ಷದಿಂದೀಚೆಗೆ ಬೆಳೆದ ಹೆರಿಗೆ ವಿಮೆ ಪರಿಕಲ್ಪನೆಯು ಭಾರತದಲ್ಲಿ ಈಗಷ್ಟೇ ಪ್ರಚಾರಕ್ಕೆ ಬರುತ್ತಿದೆ. ಹೆರಿಗೆ ವಿಮೆಯು ಗರ್ಭಧಾರಣೆ ಅವಧಿಯಲ್ಲಿ ಎದುರಾಗುವ ಅನಿರೀಕ್ಷಿತ ತೊಂದರೆಗಳಿಂದ ತಾಯಿ-ಮಗುವಿನ ಸುರಕ್ಷತೆಗೆ ಆರ್ಥಿಕ ನೆರವಿನ ಭರವಸೆಯನ್ನು ನೀಡುತ್ತದೆ.

ಹೆರಿಗೆ ಎಂಬುದು ಕೋಟ್ಯಂತರ ಮಹಿಳೆಯರ ಬದುಕಿನ ಅವಿಭಾಜ್ಯ ಘಳಿಗೆ. ಇಂದಿನ ದಿನಗಳಲ್ಲಿ ವೈದ್ಯಕೀಯ ವೆಚ್ಚಗಳು ತುಂಬಾ ದುಬಾರಿ ಈ ಸಂದರ್ಭದಲ್ಲಿ ಹೆರಿಗೆಗೂ ಮುನ್ನ ಪ್ರತಿ ಮಹಿಳೆ ಪೂರ್ವ ಸಿದ್ಧತೆ ಕೈಗೊಳ್ಳುವಂತೆ, ವೈದ್ಯಕೀಯ ಖರ್ಚುವೆಚ್ಚಗಳ ಯೋಜನೆ ರೂಪಿಸಿಕೊಳ್ಳುವ ಅಗತ್ಯವಿದೆ. ಕೆಲವು ವರ್ಷದಿಂದೀಚೆಗೆ ಬೆಳೆದ ಹೆರಿಗೆ ವಿಮೆ ಪರಿಕಲ್ಪನೆಯು ಭಾರತದಲ್ಲಿ ಈಗಷ್ಟೇ ಪ್ರಚಾರಕ್ಕೆ ಬರುತ್ತಿದೆ.

ಹೆರಿಗೆ ವಿಮೆಯನ್ನು ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಪ್ರಮುಖವಾಗಿ ತಾಯಿಯ ವಯಸ್ಸು, ಲಾಭ ಪ್ರಮಾಣದ ಮಿತಿ, ಜನಸಂಖ್ಯೆ ಗುರಿ, ಎಷ್ಟು ಹೆರಿಗೆಗೆ (1 ಅಥವಾ 2 ಮಾತ್ರ) ಕಾಲಾವಧಿ, ಹಿಂದಿನ ಹೆರಿಗೆಯಲ್ಲಾದ ತೊಂದರೆಗಳು, ಹೆಚ್ಚು ಪ್ರೀಮಿಯಂ ಕಟ್ಟಿದರೆ ಆಗುವ ಲಾಭಗಳು. ಹೆರಿಗೆ ವಿಮೆಯು ಗರ್ಭಧಾರಣೆ ವೇಳೆ ಮಹಿಳೆಗೆ ಎದುರಾಗುವ ಅನಿರೀಕ್ಷಿತ ತೊಂದರೆ ಸಂದರ್ಭದಲ್ಲಿ ಆರ್ಥಿಕ ಸುರಕ್ಷತೆ ಒದಗಿಸುತ್ತದೆ.

ಗರ್ಭಧಾರಣೆ ಮೊದಲು ಈ ವಿಮೆ ಪಡೆಯಬೇಕು. ಗರ್ಭಧಾರಣೆ ನಂತರವಾದರೆ ಕಾಯುವ ಅವಧಿಯನ್ನು ಪರಿಶೀಲಿಸಬೇಕಾಗುತ್ತದೆ. ಹೆರಿಗೆ ವಿಮೆ ಪಡೆಯುವ ಮುನ್ನ ನಿಮ್ಮ ಸಾಮೂಹಿಕ ವಿಮೆ ಮತ್ತು ನೀವು ಆರೋಗ್ಯ ವಿಮೆ ಪಡೆದಿದ್ದರೆ ಅದರಲ್ಲಿ ಹೆರಿಗೆ ವಿಮೆ ಇದಿಯೋ ಇಲ್ಲವೋ ಎಂದು ಪರಿಶೀಲಿಸಿ. ಕೆಲ ಕಂಪನಿಗಳು ಉದ್ಯೋಗಿಗಳಿಗೆ ನೀಡುವ ಸಾಮೂಹಿಕ ವಿಮೆಯಲ್ಲಿ ಮೊದಲ ಮಗುವಿಗೆ ಹೆರಿಗೆ ವಿಮೆ, ಶಿಶುವಿನ ರಕ್ಷಣೆ ಸೌಲಭ್ಯ ಒದಗಿಸಿರುತ್ತದೆ.

ಹೆರಿಗೆ ವಿಮೆ ಪಡೆಯಬೇಕಾದ ವಿಮಾದಾರ 10ರಿಂದ 48 ತಿಂಗಳು ಕಾಯಬೇಕಾಗುತ್ತದೆ. ಕಂಪನಿಗಳು ನೀಡುವ ಸಾಮೂಹಿಕ ವಿಮೆಯಲ್ಲಿ ಕಾಯುವ ಅವಧಿ 9 ತಿಂಗಳದ್ದಾಗಿರುತ್ತದೆ. ಸಾಮಾನ್ಯ ಮತ್ತು ಸಿಝೇರಿಯನ್ ಹೆರಿಗೆ 20 ಸಾವಿರ ದಿಂದ 1.5 ಲಕ್ಷದವರೆಗೆ ವಿಮೆ ಪರಿಹಾರ ಪಡೆಯಲು ಅವಕಾಶವಿದೆ. ಪ್ರಮುಖವೆಂದರೆ ಇದರಲ್ಲಿ 2 ಮಗುವಿನ ಹೆರಿಗೆಗೆ ಮಾತ್ರ ವಿಮೆ ಸೌಲಭ್ಯ ಒದಗಿಸಲಾಗುತ್ತದೆ. ವಿಮೆಯು ಗರ್ಭಧಾರಣೆ ಅವಧಿಯಲ್ಲಿ ಎದುರಾಗುವ ಅನಿರೀಕ್ಷಿತ ತೊಂದರೆಗಳಿಂದ ತಾಯಿ ಮಗುವಿನ ಸುರಕ್ಷತೆಗೆ ಭರವಸೆ ನೀಡುತ್ತದೆ.

-ಡಾ.ಎಸ್ ಪ್ರಕಾಶ್ ಎಂಎಸ್
(ಎಕ್ಸಿಕ್ಯೂಟಿವ್ ಡೈರೆಕ್ಟರ್, ಸ್ಟಾರ್ ಹೆಲ್ತ್ ಅ್ಯಂಡ್ ಎಲೈಡ್ ಎನ್ಶೂರೆನ್ಸ್)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com