9 ಸಾವಿರದ ಗಡಿಯತ್ತ ನಿಫ್ಟಿ

ಮುಂಬೈ ಷೇರುಮಾರುಕಟ್ಟೆಯಲ್ಲಿ ದಾಖಲೆ ಏರಿಕೆ ಕಂಡುಬಂದಿದ್ದು, ಸೆನ್ಸೆಕ್ಸ್ ಇದೇ ಮೊದಲ ಬಾರಿಗೆ 9 ಸಾವಿರ ಗಡಿಯತ್ತ ದಾಪುಗಾಲಿರಿಸಿದೆ.
ಷೇರುಮಾರುಕಟ್ಟೆ (ಸಂಗ್ರಹ ಚಿತ್ರ)
ಷೇರುಮಾರುಕಟ್ಟೆ (ಸಂಗ್ರಹ ಚಿತ್ರ)

ಮುಂಬೈ: ಮುಂಬೈ ಷೇರುಮಾರುಕಟ್ಟೆಯಲ್ಲಿ ದಾಖಲೆ ಏರಿಕೆ ಕಂಡುಬಂದಿದ್ದು, ಸೆನ್ಸೆಕ್ಸ್ ಇದೇ ಮೊದಲ ಬಾರಿಗೆ 9 ಸಾವಿರ ಗಡಿಯತ್ತ ದಾಪುಗಾಲಿರಿಸಿದೆ.

ಇಂದು ಬೆಳಗ್ಗೆ ಷೇರುವಹಿವಾಟು ಆರಂಭವಾಗುತ್ತಿದ್ದಂತೆಯೇ ಏರಿಕೆಯತ್ತ ಮುಖಮಾಡಿದ ನಿಫ್ಟಿ ನೋಡ-ನೋಡುತ್ತಿದ್ದಂತೆಯೇ ದಾಖಲೆ ಪ್ರಮಾಣದಲ್ಲಿ ಏರಿಕೆಯಾಯಿತು. ಇದೇ ಮೊದಲ ಬಾರಿಗೆ ನಿಫ್ಟಿ 9 ಸಾವಿರ ಗಡಿಯತ್ತ ಸಾಗಿದ್ದು, ಪ್ರಸ್ತುತ ನಿಫ್ಟಿ 8,996.60 ಅಂಶಗಳಿಗೆ ಏರಿಕೆಯಾಗಿದೆ. ಸೆನ್ಸೆಕ್ಸ್ ಕೂಡ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದ್ದು, 29,844.16 ಅಂಶಗಳಿಗೆ ಸೆನ್ಸೆಕ್ಸ್ ಏರಿಕೆಯಾಗಿದೆ.

ಇನ್ನು ಷೇರುಮಾರುಕಟ್ಟೆಯಲ್ಲಿನ ಈ ಚೇತೋಹಾರಿ ಬೆಳವಣಿಗೆಗೆ ಕೇಂದ್ರ ಬಜೆಟ್ ಮತ್ತು ರಿಸರ್ವ್ ಬ್ಯಾಂಕ್‌ನ ಕೆಲ ನಿರ್ಧಾರಗಳೇ ಕಾರಣ ಎಂದು ಹೇಳಲಾಗುತ್ತಿದ್ದು, ಆರ್‌ಬಿಐ ಅಧ್ಯಕ್ಷರಾದ ರಘುರಾಮ್ ರಾಜನ್ ಅವರು ಈ ಹಿಂದೆ ಬಡ್ಡಿದರಗಳ ಇಳಿಕೆ ಕುರಿತು ತೆಗೆದುಕೊಂಡಿದ್ದ ಕೆಲ ನಿರ್ಧಾರಗಳು ಷೇರುಮಾರುಕಟ್ಟೆಯ ಚೇತರಿಕೆಗೆ ಕಾರಣವಾಗಿದೆ. ಇನ್ನು ಆರ್‌ಬಿಐ ಈ ನಿರ್ಧಾರಗಳು ಹೂಡಿಕೆದಾರರನ್ನು ಆಕರ್ಷಿಸಿದ್ದು, ಷೇರುಮಾರುಕಟ್ಟೆಗೆ ಭಾರಿ ಪ್ರಮಾಣದಲ್ಲಿ ವಿದೇಶಿ ಬಂಡವಾಳ ಹರಿದುಬರುತ್ತಿದೆ ಎಂದು ಹೇಳಲಾಗುತ್ತಿದೆ.

ಪ್ರಸ್ತುತ ಮಾರುಕಟ್ಟೆ ಏರಿಕೆಯಾಗಿದೆ ಎಂದು ಅವಸರವಾಗಿ ಹೂಡಿಕೆ ಮಾಡುವುದನ್ನು ಬಿಟ್ಟು, ಹೂಡಿಕೆದಾರರು ಮಾರುಕಟ್ಟೆಯನ್ನು ಅಧ್ಯಯನ ಮಾಡಿ ವೈಜ್ಞಾನಿಕವಾಗಿ ಹೂಡಿಕೆ ಮಾಡಿದರೆ ಮಾತ್ರ ಲಾಭಾಂಶ ದೊರೆಯುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com