ಇ -ಶಾಪಿಂಗ್ ಮಾಡುವವರಲ್ಲಿ ಹೆಂಗಸರಿಗಿಂತ ಗಂಡಸರೇ ಮುಂದು

ಭಾರತದಲ್ಲಿ ಸ್ಮಾರ್ಟ್‌ಫೋನ್ ಬಳಸಿ ಇ ಶಾಪಿಂಗ್ ಮಾಡುವವರಲ್ಲಿ ಹೆಂಗಸರಿಗಿಂತ ಗಂಡಸರ ಸಂಖ್ಯೆಯೇ ಜಾಸ್ತಿ ಎಂದು ಸಮೀಕ್ಷೆಯೊಂದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತದಲ್ಲಿ ಸ್ಮಾರ್ಟ್‌ಫೋನ್ ಬಳಸಿ ಇ ಶಾಪಿಂಗ್ ಮಾಡುವವರಲ್ಲಿ ಹೆಂಗಸರಿಗಿಂತ ಗಂಡಸರ ಸಂಖ್ಯೆಯೇ ಜಾಸ್ತಿ ಎಂದು ಸಮೀಕ್ಷೆಯೊಂದು ಹೇಳಿದೆ. ಪ್ರತೀ ತಿಂಗಳು ಮಹಿಳೆಯರಿಗಿಂತ ಹೆಚ್ಚು ಸಮಯವನ್ನು ಗಂಡಸರು ಇ-ಕಾಮರ್ಸ್ ಸೈಟ್‌ಗಳಲ್ಲಿ ವಿನಿಯೋಗಿಸುತ್ತಾರಂತೆ. ಹೆಚ್ಚಿನವರು ಸ್ಮಾರ್ಟ್‌ಫೋನ್ ಬಳಸಿಯೇ ಶಾಪಿಂಗ್ ಮಾಡುತ್ತಾರೆ ಎಂಬುದು ವಿಶೇಷ.

ಅಂದಹಾಗೆ ಭಾರತದಲ್ಲಿ ಸ್ಮಾರ್ಟ್‌ಫೋನ್ ಬಳಸುವ ಮಹಿಳೆಯರಲ್ಲಿ ಕೇವಲ ಶೇ. 20ರಷ್ಟು ಮಹಿಳೆಯರು ಮಾತ್ರ ಡಾಟಾ ಕನೆಕ್ಟಿವಿಟಿ ಬಳಸುತ್ತಿದ್ದಾರೆ. ಆದ್ದರಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸ್ಮಾರ್ಟ್‌ಫೋನ್ ಮೂಲಕ ಶಾಪಿಂಗ್ ಮಾಡುವುದಿಲ್ಲ ಎಂದು ಹೇಳಲಾಗುತ್ತಿದೆ.

ಭಾರತದಲ್ಲಿ ಸ್ಮಾರ್ಟ್‌ಫೋನ್ ಬಳಸಿ ದಿನಾ ಶಾಪಿಂಗ್ ನಡೆಸಲು ಪುರುಷರ ವಿನಿಯೋಗಿಸುವ ಸಮಯ ಸರಾಸರಿ 32  ನಿಮಿಷ. ಆದರೆ ಮಹಿಳೆಯರು ಶಾಪಿಂಗ್ ನಡೆಸಲು ವಿನಿಯೋಗಿಸುವ ಸಮಯ 21 ನಿಮಿಷ !

ಏತನ್ಮಧ್ಯೆ, ದಕ್ಷಿಣ ಕೊರಿಯಾದಲ್ಲಿ ಮಹಿಳೆಯರು ದಿನಾ 270 ನಿಮಿಷಗಳನ್ನು ಶಾಪಿಂಗ್ ಗಾಗಿ ವಿನಿಯೋಗಿಸಿದರೆ ಗಂಡಸರು  150 ನಿಮಿಷಗಳನ್ನು ಶಾಪಿಂಗ್‌ಗಾಗಿ ವಿನಿಯೋಗಿಸುತ್ತಾರೆ. ಅಮೆರಿಕದಲ್ಲಿ ಪುರುಷರು 95 ನಿಮಿಷ ಇ ಶಾಪಿಂಗ್ ಮಾಡಿದರೆ ಅಲ್ಲಿನ ಮಹಿಳೆಯರು 180 ನಿಮಿಷಗಳಷ್ಟು ಕಾಲ ಮೊಬೈಲ್ ಫೋನ್ ಬಳಸಿ ಇ ಶಾಪಿಂಗ್ ಮಾಡುತ್ತಾರಂತೆ. ಇನ್ನುಳಿದ ರಾಷ್ಟ್ರಗಳನ್ನು ಹೋಲಿಸಿದರೆ ಇ ಶಾಪಿಂಗ್‌ನಲ್ಲಿ ಕಡಿಮೆ ಸಮಯ ವ್ಯಯಿಸುವವರು ಮಲೇಷ್ಯಾದವರಾಗಿದ್ದಾರೆ. ಮಲೇಷ್ಯಾದ ಮಹಿಳೆಯರು ದಿನವೊಂದರಲ್ಲಿ 6 ನಿಮಿಷಗಳನ್ನು ಮಾತ್ರ ಇ-ಶಾಪಿಂಗ್‌ಗಾಗಿ ವಿನಿಯೋಗಿಸುತ್ತಾರಂತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com