ಮುಂದುವರೆದ ಚಿನ್ನದ ಕುಸಿತ, ಮತ್ತೆ 320ರು. ಇಳಿಕೆ

ಚಿನ್ನ ಹಾಗೂ ಬೆಳ್ಳಿ ಬೆಲೆ ಕುಸಿತ ಮುಂದುವರೆದಿದ್ದು, ಶುಕ್ರವಾರದ ವಹಿವಾಟಿನಲ್ಲಿ ಪ್ರತಿ ಹತ್ತು ಗ್ರಾಂ ಸ್ಟಾಂಡರ್ಡ್ ಚಿನ್ನದ ದರ 320 ರುಪಾಯಿ ಇಳಿಕೆ ಕಂಡು 25,50 ರುಪಾಯಿಗೆ ತಲುಪಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಚಿನ್ನ ಹಾಗೂ ಬೆಳ್ಳಿ ಬೆಲೆ ಕುಸಿತ ಮುಂದುವರೆದಿದ್ದು, ಶುಕ್ರವಾರದ ವಹಿವಾಟಿನಲ್ಲಿ ಪ್ರತಿ ಹತ್ತು ಗ್ರಾಂ ಸ್ಟಾಂಡರ್ಡ್ ಚಿನ್ನದ ದರ 320 ರುಪಾಯಿ ಇಳಿಕೆ ಕಂಡು 25,050 ರುಪಾಯಿಗೆ ತಲುಪಿದೆ.

ಇನ್ನು ಬೆಳ್ಳಿ ದರ ಸಹ ಕೆಜಿಗೆ 34,000 ರುಪಾಯಿಗೆ ಇಳಿದಿದ್ದು, ಕಳೆದ ಐದು ವರ್ಷಗಳಲ್ಲೇ ಇದು ಬೆಳ್ಳಿಯ ಕನಿಷ್ಠ ದರವಾಗಿದೆ.

ಶುಕ್ರವಾರ ಸ್ಟ್ಯಾಂಡರ್ಡ್‌ ಚಿನ್ನ 10 ಗ್ರಾಂಗಳಿಗೆ ಚೆನ್ನೈನಲ್ಲಿ 25,070 ರುಪಾಯಿ ಹಾಗೂ ಮುಂಬೈನಲ್ಲಿ 24,705 ರುಪಾಯಿಯಲ್ಲಿ ವಹಿವಾಟು ನಡೆಸಿತು.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಸತತ ಕುಸಿತ ಕಾಣುತ್ತಿದ್ದು, ಜಾಗತಿಕ ಮಾರುಕಟ್ಟೆಗಳಲ್ಲಿನ ಈ ಬೆಳವಣಿಗೆ ದೇಶೀಯ ಚಿನಿವಾರ ಪೇಟೆ ಮೇಲೆ ಭಾರಿ ಒತ್ತಡ ಹೇರಿದೆ. ಇದೇ ಸಂದರ್ಭದಲ್ಲಿ ಆಭರಣ ತಯಾರಕರು ಖರೀದಿಗೆ ಮುಂದಾಗದಿದ್ದದು ಮತ್ತಷ್ಟು ಕುಸಿತಕ್ಕೆ ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com