ವಿಪ್ರೊ ಲಾಭ ರು.2,188 ಕೋಟಿ

ದೇಶದ ಮೂರನೆ ಅತಿದೊಡ್ಡ ಸಾಫ್ಟವೇರ್ ಸೇವಾ ಕಂಪನಿ ವಿಪ್ರೊ ಪ್ರಸಕ್ತ ಸಾಲಿನ ಮೊಲ ತ್ರೈಮಾಸಿಕದಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ದೇಶದ ಮೂರನೆ ಅತಿದೊಡ್ಡ ಸಾಫ್ಟವೇರ್ ಸೇವಾ ಕಂಪನಿ ವಿಪ್ರೊ ಪ್ರಸಕ್ತ ಸಾಲಿನ ಮೊಲ ತ್ರೈಮಾಸಿಕದಲ್ಲಿ ರು.2,187  ಕೋಟಿ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಗಳಿಸಿದ್ದ ರು.2,103.20 ಕೋಟಿಗೆ ಹೋಲಿಸಿದರೆ ಶೇ.4ರಷ್ಟು ಏರಿಕೆ ದಾಖಲಿಸಿದೆ.

ಈ ಅವಧಿಯಲ್ಲಿ ಕಪಂನಿಯ ಒಟ್ಟಾರೆ ಆದಾಯ ಶೇ.10.5ರಷ್ಟು ಏರಿಕೆಯೊಂದಿಗೆ ರು.12,894.80 ಕೋಟಿಗೆ ತಲುಪಿದೆ. ಕಂಪನಿಯ ಮಾಹಿತಿ ತಂತ್ರಜ್ಞಾಣ ಸೇವೆಗಳ ಆದಾಯದಲ್ಲಿ ಶೇ.1.1ರಷ್ಟು ಏರಿಕೆ ಕಂಡು 179 ಕೋಟಿ ಡಾಲರ್ ತಲುಪಿದೆ. ಇದು ಅಂದಾಜಿತ ಆದಾಯಕ್ಕಿಂತ ತುಸು ಹೆಚ್ಚಾಗಿದೆ.

ಪ್ರಸಕ್ತ ಹಣಕಾಸು ಸಾಲಿನ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಐಟಿ ಸೇವೆಗಳಿಂದ 182 ಕೋಟಿ ಆದಾಯವನ್ನು ಕಂಪನಿ ನಿರೀಕ್ಷಿಸಿದೆ. ಸೇವಾ ಒಪ್ಪಂದಗಳು ಹೆಚ್ಚು ಸ್ಪರ್ಧಾತ್ಮಕವಾಗುತ್ತಿವೆ. ಇದರಿಂದ ಸೇವೆಗಳನ್ನು ಹೆಚ್ಚು ಆಟೋಮೇಷನ್ ಗೊಳಿಸುವತ್ತ ನೋಟ ಹರಿಸಿದ್ದೇವೆ ಎಂದು ಕಂಪನಿ ಸಿಇಒ ಮತ್ತು ಬೋರ್ಡ್ ಸದಸ್ಯ ಟಿ.ಕೆ.ಕುರಿಯನ್ ಹೇಳಿದ್ದಾರೆ. ಈ ಅವಧಿಯಲ್ಲಿ ಕಂಪನಿ ಸಿಬ್ಬಂದಿ ಸಂಖ್ಯೆ 1,58,217ರಿಂದ 1,61,789ಕ್ಕೆ ಏರಿಕೆ ಕಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com