ಹ್ಯುಂಡೈ ಕಂಪನಿಗೆ 420 ಕೋಟಿ ದಂಡ

ಮುಕ್ತ ಮಾರುಕಟ್ಟೆಯಲ್ಲಿ ಬಿಡಿ ಭಾಗಗಳ ಮಾರಾಟ ನಿಯಂತ್ರಿಸಿರುವುದರ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಭಾರತೀಯ ಸ್ಪರ್ಧಾ ವಿರೋಧ...
ಹ್ಯುಂಡೈ ಲೋಗೋ
ಹ್ಯುಂಡೈ ಲೋಗೋ

ನವದೆಹಲಿ: ಮುಕ್ತ ಮಾರುಕಟ್ಟೆಯಲ್ಲಿ ಬಿಡಿ ಭಾಗಗಳ ಮಾರಾಟ ನಿಯಂತ್ರಿಸಿರುವುದರ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಭಾರತೀಯ ಸ್ಪರ್ಧಾ ವಿರೋಧ (ಸಿಸಿಐ) ಸಂಸ್ಥೆ ಹ್ಯುಂಡೈ ಕಾರು ಕಂಪನಿಗೆ ರೂ. 420 ಕೋಟಿ ದಂಡ ವಿಧಿಸಿದೆ. ಇದೇ ಸಂದರ್ಭದಲ್ಲಿ ರೇವಾ ಮತ್ತು ಪ್ರೀಮಿಯರ್ ಕಾರು ಕಂಪನಿಗಳು ಸ್ಪರ್ಧೆ ವಿರೋಧಿಸುವಂತಹ ಕ್ರಮಗಳನ್ನು ನಿಲ್ಲಿಸಬೇಕೆಂದು ಎಚ್ಚರಿಸಿದೆ.

ಕಳೆದ ಆಗಸ್ಟ್ ನಿಂದಲೂ ಕಂಪನಿ 14 ಕಂಪನಿಗಳ ಮೇಲೆ ರೂ. 2,544.64 ಕೋಟಿ ದಂಡ ವಿಧಿಸಿದೆ. ಹೋಂಡಾ ಸೀಲ್,ಫಿಯಟ್, ಪೋಕ್ಸ್ ವ್ಯಾಗನ್, ಬಿಎಂಡಬ್ಲ್ಯು, ಪೋರ್ಡ್, ಜಿಎಂ, ಹಿಂದೂಸ್ತಾನ್ ಮೋಟಾರ್ಸ್, ಮಹೀಂದ್ರ, ಮಾರುತಿ ಸುಜುಕಿ, ಬೆಂಜ್, ನಿಸಾನ್, ಸ್ಕೋಡಾ, ಟಾಟಾ ಮತ್ತು ಟೊಯೋಟಾ ಕಂಪನಿಗಳ ಮೇಲೂ ದಂಡ ವಿಧಿಸಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com