
ಬೆಂಗಳೂರು/ಹೈದರಾಬಾದ್/ಕೊಚ್ಚಿ: ಮುಂದಿನ ಸಂಕ್ರಾತಿ ವೇಳೆಗೆ ಚಿನ್ನ ಕನಿಷ್ಠ ಅಂದರೆ 20,500 ರುಪಾಯಿಗೆ ಸಾಧ್ಯತೆ ಇದ್ದು, ಆಭರಣ ಪ್ರೀತಿಯರಿಗೆ ಚಿನ್ನದ ಸುಗ್ಗಿ ಒದಗಲಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ತಲ್ಲಣಗಳಿಂದಾಗಿ ಮುಂದಿನ ದಿನಗಳಲ್ಲಿ ಚಿನ್ನ ಮತ್ತಷ್ಟು ಬೇಡಿಕೆ ಕಳೆದುಕೊಳ್ಳಲಿದ್ದು, ಇನ್ನು ಆರು ತಿಂಗಳೊಳಗಾಗಿ 10 ಗ್ರಾಂ ಚಿನ್ನ ಬೆಲೆ 20 ಸಾವಿರಕ್ಕೆ ಇಳಿಯಲಿದೆ ಎಂದು ಮಾರುಕಟ್ಟೆ ತಜ್ಞರು ಭವಿಷ್ಯ ನುಡಿದಿದ್ದಾರೆ.
ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿ ದರ ಏರಿಕೆಯ ನಿರ್ಧಾರ ಪ್ರಕಟಿಸಲಿದೆ. ಬಡ್ಡಿ ದರ ಏರಿಕೆಯಾಗುವ ಸಾಧ್ಯತೆ ಇದ್ದು, ಈ ನಿರ್ಧಾರ ಚಿನ್ನದ ಮೇಲೆ ಋಣಾತ್ಮಕ ಪರಿಣಾಮ ಬೀರಲಿದ್ದು, ಚಿನ್ನದ ಬೆಲೆ ಮತ್ತಷ್ಟು ಕುಸಿತಕ್ಕೆ ಕಾರಣವಾಗಲಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸದ್ಯ 1 ಔನ್ಸ್ ಬಂಗಾರದ ಬೆಲೆ 1050 ಡಾಲರ್ ಇದ್ದು, ಇದು 900 ಡಾಲರ್‘ಗೆ ಕುಸಿಯುವ ಸಾಧ್ಯತೆ ಇದೆ. ಅಂದರೆ ಶೇ.10ರಿಂದ25ರಷ್ಟು ಬಂಗಾರದ ಬೆಲೆ ಕುಸಿಯುವ ಸಾಧ್ಯತೆ ಇದೆ.
ಪ್ರಸ್ತುತ ಚಿನ್ನದ ದರ 24 ಕ್ಯಾರಟ್ ಬೆಲೆ 10 ಗ್ರಾಂಗೆ 25,270 ರುಪಾಯಿ ಇದ್ದು, 22 ಕ್ಯಾರಟ್ ಬೆಲೆ 23,620 ರುಪಾಯಿದೆ.
Advertisement