ಭಾರತಕ್ಕೆ ಬರಲಿದೆ ಚಿನ್ನದ ಬಾಂಡ್

ಭಾರತ ವಾರ್ಷಿಕ 800ರಿಂದ 900 ಟನ್ ಚಿನ್ನ ಆಮದು ಮಾಡಿಕೊಳ್ಳುತ್ತಿದೆ. ಕಚ್ಚಾ ತೈಲ ಆಮದಿನ ನಂತರ ಅತಿ ಹೆಚ್ಚು ಆಮದು ಇದಾಗಿದ್ದು ದೇಶದ ವಿದೇಶಿ ವಾಣಿಜ್ಯ ವಹಿವಾಟಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ...
ಭಾರತಕ್ಕೆ ಬರಲಿದೆ ಚಿನ್ನದ ಬಾಂಡ್ (ಸಾಂದರ್ಭಿಕ ಚಿತ್ರ)
ಭಾರತಕ್ಕೆ ಬರಲಿದೆ ಚಿನ್ನದ ಬಾಂಡ್ (ಸಾಂದರ್ಭಿಕ ಚಿತ್ರ)

ನವದೆಹಲಿ: ಭಾರತ ವಾರ್ಷಿಕ 800ರಿಂದ 900 ಟನ್ ಚಿನ್ನ ಆಮದು ಮಾಡಿಕೊಳ್ಳುತ್ತಿದೆ.

ಕಚ್ಚಾ ತೈಲ ಆಮದಿನ ನಂತರ ಅತಿ ಹೆಚ್ಚು ಆಮದು ಇದಾಗಿದ್ದು ದೇಶದ ವಿದೇಶಿ ವಾಣಿಜ್ಯ ವಹಿವಾಟಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಆಮದು ಮಾಡಿ ಕೊಳ್ಳುವ ಒಟ್ಟಾರೆ ಚಿನ್ನದಲ್ಲಿ 300 ಟನ್‍ವರೆಗೂ ಹೂಡಿಕೆಗಾಗಿ ಖರೀದಿಸಲಾಗುತ್ತಿದೆ. ಹೀಗಾಗಿ ಭೌತಿಕವಾಗಿ ಚಿನ್ನ ಖರೀದಿಸಿ ಹೂಡಿಕೆ ಮಾಡುವ ಬದಲಿಗೆ ಚಿನ್ನದ ಬಾಂಡ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಯೋಜನೆಯನ್ನು ಕೇಂದ್ರ ಹೊಂದಿದೆ.

ಯೋಜನೆಯ ಕೆಲವು ಪ್ರಮುಖಾಂಶಗಳು ಹೀಗಿವೆ

  • ಚಿನ್ನದ ಬಾಂಡ್‍ಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರಕ್ಕೆ ಲಿಂಕ್ ಮಾಡಲಾಗುವುದು. ಈ ಬಾಂಡ್‍ಗಳ ಮೌಲ್ಯ ಚಿನ್ನದ ದರಕ್ಕೆ ಅನುಗುಣವಾಗಿರಲಿದೆ.
  • ಚಿನ್ನದ ಬಾಂಡ್‍ಗಳಿಗೆ ಕನಿಷ್ಠ ಶೇ.2ರಷ್ಟು ಬಡ್ಡಿ ನೀಡಲಾಗುವುದು.
  • ಸರಕು ವಿನಿಮಯ ಮಾರುಕಟ್ಟೆಯಲ್ಲಿ ಮಾರಾಟ, ವಹಿವಾಟು ನಡೆಸಲು ಬಳಸಬಹುದು.
  • ಸಾಲ ಪಡೆಯಲು ಶ್ಯೂರಿಟಿಯಾಗಿ ಬಳಸಬಹುದು.
  • ವ್ಯಕ್ತಿಯೊಬ್ಬರಿಗೆ ವಾರ್ಷಿಕ 500 ಗ್ರಾಂ ನಿಗದಿ.
  • 2, 5, 10 ಗ್ರಾಂ ಚಿನ್ನ ಅಥವಾ ಇತರೆ ಮುಖಬೆಲೆಯಲ್ಲಿ ಬಾಂಡ್‍ಗಳನ್ನು ವಿತರಿಸಲಾಗುವುದು.
  • ಬಾಂಡ್‍ಗಳ ಅವಧಿ 5 ರಿಂದ 7 ವರ್ಷ
  • ಭೌತಿಕವಾಗಿ ಚಿನ್ನಕ್ಕಿರುವ ಬಂಡವಾಳ ಗಳಿಕೆ ತೆರಿಗೆ ಬಾಂಡ್‍ಗಳಿಗೂ ಅನ್ವಯ. ಯೋಜನೆಯಿಂದ ಭೌತಿಕವಾಗಿ ಚಿನ್ನ ಖರೀದಿ ಇಳಿಮುಖ ಕಂಡು ಚಿನ್ನದ ಬಾಂಡ್‍ಗಳಲ್ಲಿ ಹೂಡಿಕೆಗೆ ಉತ್ತೇಜಿಸುವ ಗುರಿಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com