ಕೆನರಾ ಬ್ಯಾಂಕ್‍ಗೆ ನಾಲ್ಕನೇ ತ್ರೈಮಾಸಿಕದಲ್ಲಿ ರು. 2703 ಕೋಟಿ ನಿವ್ವಳ ಲಾಭ

ಕೆನರಾ ಬ್ಯಾಂಕ್ ನಾಲ್ಕನೇ ತ್ರೈಮಾಸಿಕದಲ್ಲಿ ರು. 2703 ಕೋಟಿ ನಿವ್ವಳ ಲಾಭ ಗಳಿಸಿದ್ದು, ಕಳೆದ ಸಾಲಿಗೆ ಹೋಲಿಸಿದರೆ ಶೇ.11ರಷ್ಟು ಬೆಳವಣಿಗೆ ಕಂಡಿದೆ...
ಕೆನರಾ ಬ್ಯಾಂಕ್
ಕೆನರಾ ಬ್ಯಾಂಕ್

ಬೆಂಗಳೂರು: ಕೆನರಾ ಬ್ಯಾಂಕ್ ನಾಲ್ಕನೇ ತ್ರೈಮಾಸಿಕದಲ್ಲಿ ರು. 2703 ಕೋಟಿ ನಿವ್ವಳ ಲಾಭ ಗಳಿಸಿದ್ದು, ಕಳೆದ ಸಾಲಿಗೆ ಹೋಲಿಸಿದರೆ ಶೇ.11ರಷ್ಟು ಬೆಳವಣಿಗೆ ಕಂಡಿದೆ.

ಬ್ಯಾಂಕ್‍ಗೆ ರು. 6950 ಒಟ್ಟು ಲಾಭವಾಗಿದ್ದು, ಶೇ.2.3ರಷ್ಟು ಲಾಭ ಏರಿಕೆಯಾಗಿದೆ. ಬಡ್ಡಿಯೇತರ ಆದಾಯದಲ್ಲಿ ರು. 4550 ಕೋಟಿ ಮೂಲಕ ಶೇ.15.7 ರಷ್ಟು ಬೆಳವಣಿಗೆ ಕಂಡಿದೆ. ದೇಶಿಯ ವ್ಯವಹಾರದಲ್ಲಿ ನಿವ್ವಳ ಬಡ್ಡಿ ಅಂತರ ಶೇ.2.36 ಹಾಗೂ ಜಾಗತಿಕ ವ್ಯವಹಾರದಲ್ಲಿ ಶೇ.2.25 ಬೆಳವಣಿಗೆಯಾಗಿದೆ.

ಒಟ್ಟಾರೆ ವ್ಯವಹಾರ ರು. 8.4 ಲಕ್ಷ ಕೋಟಿ ಹಾಗೂ ಒಟ್ಟು ಠೇವಣಿ ರು. 4.74 ಕೋಟಿಯಾಗಿದ್ದು, ಠೇವಣಿಯಲ್ಲಿ ಶೇ.12.6ರಷ್ಟು ಪ್ರಗತಿಯಾಗಿದೆ. ಆದ್ಯತಾ ಕ್ಷೇತ್ರದಲ್ಲಿ ಶೇ.21, ಕೃಷಿ ವಲಯದಲ್ಲಿ ಶೇ.21, ಸಣ್ಣ ಕೈಗಾರಿಕೆ ಕ್ಷೇತ್ರದಲ್ಲಿ ಶೇ.21, ರೀಟೇಲ್ ಕ್ಷೇತ್ರದಲ್ಲಿ ಶೇ.26, ನೇರ ಗೃಹ ಸಾಲದಲ್ಲಿ ಶೇ.29, ವಾಹನ ಸಾಲದಲ್ಲಿ ಶೇ.22 ಹಾಗೂ ವೈಯಕ್ತಿಕ ಸಾಲದಲ್ಲಿ ಶೇ.80ರಷ್ಟು ಪ್ರಗತಿಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ ಪಿ.ಎಸ್.ರಾವತ್ ತಿಳಿಸಿದರು.

ಪ್ರಸಕ್ತ ವರ್ಷ ದೇಶದಲ್ಲಿ ಒಟ್ಟು 930 ಶಾಖೆಗಳನ್ನು ಆರಂಭಿಸಿದ್ದು, ಈಗ ಬ್ಯಾಂಕ್ ಒಟ್ಟು 5,682 ಶಾಖೆಗಳನ್ನು ಹೊಂದಿದೆ. 2,221 ನೂತನ ಎಟಿಎಂ ಘಟಕಗಳನ್ನು ತೆರೆಯಲಾಗಿದ್ದು, ಒಟ್ಟು 8,533 ಎಟಿಎಂಗಳನ್ನು ಬ್ಯಾಂಕ್ ಹೊಂದಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com