ಎಟಿಎಂ
ಎಟಿಎಂ

ಮುಖ ಗುರುತಿಸುವ ಎಟಿಎಂ: ಚೀನಿ ಸಂಶೋಧಕರ ಹೊಸ ಶೋಧ

ಚೀನಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮುಖ ಗುರುತಿಸುವ ಎಟಿಎಂ ಅನ್ನು ಅಭಿವೃದ್ಧಿಪಡಿಸಿದೆ...

ಬೀಜಿಂಗ್: ಭಾರತದಲ್ಲಿ ಧ್ವನಿಯಾಧಾರಿತ ಪಾಸ್‍ವರ್ಡ್ ಅನ್ನು ತರಲು ಐಸಿಐಸಿಐ ಬ್ಯಾಂಕ್ ಉದ್ದೇಶಿಸಿದ ವಿಚಾರ ಚರ್ಚೆಯಾಗಿತ್ತು. ಆದರೆ ಚೀನಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮುಖ ಗುರುತಿಸುವ ಎಟಿಎಂ ಅನ್ನು ಅಭಿವೃದ್ಧಿಪಡಿಸಿದೆ.

ಈ ಮೂಲಕ ಎಟಿಎಂ ಕಳವು, ಡರೋಡೆ ಪ್ರಕರಣ ತಪ್ಪಿಸಬಹುದು ಎನ್ನುವುದು ಇಂಥ ಒಂದು ವ್ಯವಸ್ಥೆಯನ್ನು ರೂಪಿಸಿದ ತ್ಸಿಂಗ್ವಾ ವಿವಿ ಮತ್ತು ತ್ಸೆಕ್ವಾನ್ ತಂತ್ರಜ್ಞಾನ ಸಂಸ್ಥೆಯ ಹೇಳಿಕೆ. ಪೂರ್ವ ಚೀನಾದ ಜೆಜಿಯಾಂಗ್ ಪ್ರಾಂತ್ಯದಲ್ಲಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಈ ವ್ಯವಸ್ಥೆಯಲ್ಲಿ ಪಿನ್ ನಂಬರ್ ಗೊತ್ತಿದ್ದರೂ, ಕಾರ್ಡು ಕಳ್ಳತನವಾದರೂ, ಕಾರ್ಡುದಾರನ ಹೊರತುಪಡಿಸಿ ಬೇರೆ ಯಾರಿಂದಲೂ ಹಣ ಹಿಂಪಡೆಯುವುದು ಅಸಾಧ್ಯ ಎಂದು ಚೀನೀ ತಂತ್ರಜ್ಞಾನ ಸಂಸ್ಥೆ ತಿಳಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com