ಅಕ್ಟೋಬರ್‍ನಲ್ಲಿ ತಯಾರಿಕಾ ವಲಯ ಇಳಿಮುಖ

ಉತ್ಪಾದನೆ ಆರ್ಡರ್‍ಗಳು ಕುಸಿದಿದ್ದರಿಂದ ಅಕ್ಟೋಬರ್ ತಿಂಗಳಲ್ಲಿ ದೇಶದ ತಯಾರಿಕಾ ವಲಯ ಕಳೆದ 22 ತಿಂಗಳಲ್ಲೇ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನವದೆಹಲಿ: ಉತ್ಪಾದನೆ ಆರ್ಡರ್‍ಗಳು ಕುಸಿದಿದ್ದರಿಂದ ಅಕ್ಟೋಬರ್ ತಿಂಗಳಲ್ಲಿ ದೇಶದ ತಯಾರಿಕಾ ವಲಯ ಕಳೆದ 22 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ. 
ನಿಕ್ಕಿ ಭಾರತೀಯ ತಯಾರಿಕಾ ವಲಯದ ಪಿಎಂಐ ಸೂಚ್ಯಂಕ ಸೋಮವಾರ ಬಿಡುಗಡೆಯಾಗಿದ್ದು ಸೆಪ್ಟೆಂಬರ್‍ನಲ್ಲಿ 51.2 ಇದ್ದದು ಅಕ್ಟೋಬರ್‍ನಲ್ಲಿ 50.7ಕ್ಕೆ ಕುಸಿದಿದೆ. ಇದು ದೇಶದ ತಯಾರಿಕಾ ವಲಯ ದುರ್ಬಲವಾಗುತ್ತಿರುವುದನ್ನು ತೋರಿಸಿದೆ. 
ಪಿಎಂಐ ಸೂಚ್ಯಂಕ 50ಕ್ಕಿಂತಲೂ ಮೇಲಿದ್ದರೆ ಪ್ರಗತಿಯಲ್ಲಿದೆ ಎಂದಾಗಲಿದೆ, ಒಂದು ವೇಳೆ 50ಕ್ಕಿಂತ ಕೆಳಗಿಳಿದಲ್ಲಿ ಕುಸಿತದಲ್ಲಿದೆ ಎಂದರ್ಥ. ಭಾರತದ ತಯಾರಿಕಾ ವಲಯದ ಆರ್ಥಿಕತೆ ಮತ್ತಷ್ಟು ಕುಸಿತದತ್ತ ಸಾಗಿರುವುದನ್ನು ಅಕ್ಟೋಬರ್ ತಿಂಗಳ ಪಿಎಂಐ ತೋರಿಸುತ್ತದೆ. 
ಹೊಸ ಆರ್ಡರ್‍ಗಳು ಬಾರದಿರುವುದರಿಂದ ಪ್ರಗತಿ ಕುಂಠಿತಗೊಳ್ಳುತ್ತಿದೆ ಎಂದು ಪಿಎಂಐ ಸೂಚ್ಯಂಕ ವರದಿಯ ಲೇಖಕರು ಮತ್ತು ಮರ್ಕಿಟ್‍ನ ಆರ್ಥಿಕ ತಜ್ಞರಾದ ಪೊಲಿಯಾನ ಡಿ ಲಿಮ ಹೇಳಿದ್ದಾರೆ. ತಯಾರಿಕಾ ವಲಯದಲ್ಲಿ ಆರ್ಡರ್‍ಗಳು ಕಡಿಮೆಯಾಗಿದ್ದರೂ ಹೊಸ ನೇಮಕಾತಿಗಳಲ್ಲಿ ತುಸು ಏರಿಕೆ ಕಂಡಿದೆ. ಜನವರಿಯಿಂದೀಚೆಗೆ ಮೊದಲ ಬಾರಿಗೆ ಅಕ್ಟೋಬರ್ ನಲ್ಲಿ ಉದ್ಯೋಗ ನೇಮಕಾತಿ ಸ್ವಲ್ಪ ಹೆಚ್ಚಿದೆ ಎಂದು ವರದಿ ವಿವರಿಸಿದೆ. 
ಒಟ್ಟಾರೆ ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟಿನಿಂದ ಕೂಡಿದ್ದರೂ ಕಂಪನಿಗಳು ಹೊಸ ಸಿಬ್ಬಂದಿ ನೇಮಕಾತಿ ಮಾಡಿಕೊಂಡಿವೆ. ಇದರೊಂದಿಗೆ ಉಳಿಕೆ ದಾಸ್ತಾನು ಕಡಿಮೆಯಾಗಿರುವುದರಿಂದ ಮುಂದಿನ ತಿಂಗಳುಗಳಲ್ಲಿ ತಯಾರಿಕೆ ಹೆಚ್ಚಲಿದೆ ಎಂದು ಲಿಮಾ ಅಂದಾಜಿಸಿದ್ದಾರೆ.
ಅಕ್ಟೋಬರ್ ತಿಂಗಳಲ್ಲಿ ಭಾರತದ ತಯಾರಿಕಾ ವಲಯದ ಮೇಲೆ ಹಣದುಬ್ಬರ ಒತ್ತಡವೂ ಇತ್ತು. ಲೋಹ, ಪೇಪರ್ ಮತ್ತು ಆಹಾರ ಉತ್ಪನ್ನಗಳ ದರಗಳು ಹೆಚ್ಚಿದ ವರದಿಗಳ ನಡುವೆ ಸರಾಸರಿ ಖರೀದಿ ವೆಚ್ಚ ಹೆಚ್ಚಿದೆ. ಆದರೂ ಇದು ಕಡಿಮೆ ಪ್ರಮಾಣದಲ್ಲಿದ್ದು ಈ ಏರಿಕೆಯನ್ನು ಗ್ರಾಹಕರ ಮೇಲೆ ವರ್ಗಾಯಿಸಲಾಗಿದೆ ಎಂದು ಸಮೀಕ್ಷೆ  ವರಿಸಿದೆ. ಹಣದುಬ್ಬರ ಏರುಮುಖದಲ್ಲಿದ್ದು, ಆರ್ ಬಿಐ ಬಡ್ಡಿದರ ಕಡಿತ ಸಾಧ್ಯತೆ ಕಡಿಮೆ ಎಂದು ಲಿಮ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com