
ಬೆಂಗಳೂರು: ಪ್ರಸಕ್ತ ಹಣಕಾಸು ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ವಿಜಯಾಬ್ಯಾಂಕ್ ರು. ೧೧೫.೨೯ ಕೋಟಿ ನಿವ್ವಳ ಲಾಭ ಗಳಿಸಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಗಳಿಸಿದ್ದ ರು.೧೪೩.೭೫ ಕೋಟಿಗೆ ಹೋಲಿಸಿದರೆ ಶೇ.೧೯.೮೦ರಷ್ಟು ಇಳಿಮುಖ ಕಂಡಿದೆ. ಬ್ಯಾಂಕ್‌ನ ಒಟ್ಟಾರೆ ಆದಾಯ ಕಳೆದ ವರ್ಷ ಇದೇ ಅವಧಿಯಲ್ಲಿ ರು.೩,೨೫೩.೭೫ ಕೋಟಿ ಇದ್ದರೆ, ಈ ವರ್ಷ ರು.೩,೨೦೨.೮೯ ಕೋಟಿಗೆ ಇಳಿದಿದೆ. ಬ್ಯಾಂಕ್‌ನ ಕಾರ್ಯಾಚರಣೆ ಆದಾಯದಲ್ಲಿ ಏರಿಕೆ ಕಂಡಿದ್ದರೂ ಎನ್‌ಪಿಎ (ಅನು ತ್ಪಾದಕ ಆಸ್ತಿ)ಗೆ ಮಾತ್ರವೇ ರು.೨೭೨ ಕೋಟಿ ಪ್ರಾವಿಷನ್ ಮಾಡಿದ್ದರಿಂದ ನಿವ್ವಳ ಲಾಭ ಇಳಿಮುಖ ಕಂಡಿದೆ ಎಂದು ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಕಿಶೋರ್ ಸಾನ್ಸಿ ಹೇಳಿದ್ದಾರೆ. ನಿವ್ವಳ ಲಾಭ ಕುಸಿತಕ್ಕೆ ಮೂಲಸೌಕರ್ಯ ಮತ್ತು ಬೃಹತ್ ಕಾರ್ಪೊರೇಟ್ ಗಳು ಕಾರಣವಾಗಿವೆ ಎಂದಿದ್ದಾರೆ.
ಬ್ಯಾಂಕ್‌ನ ನಿವ್ವಳ ಎನ್‌ಪಿಎ ಶೇ.೨.೮೫ರಷ್ಟು ಇದ್ದದು ಶೇ.೩.೯೮ಕ್ಕೆ ಏರಿಕೆ ಕಂಡಿದೆ. ಹೀಗಾಗಿ ಪ್ರಾವಿಷನ್ ಗಾಗಿ ಶೇ.೫೮.೨೮ರಷ್ಟು ಮೀಸಲಿಡಲಾಗಿದೆ ಎಂದು ಹೇಳಿದ್ದಾರೆ.
Advertisement