ಮುಂಬೈ: ಪ್ರಸಕ್ತ ಹಣಕಾಸು ಸಾಲಿನ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದೇಶದಲ್ಲಿ ಚಿನ್ನದ ಬೇಡಿಕೆ ಶೇ.13ರಷ್ಟು ಏರಿಕೆ ಕಂಡಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ 238.20 ಟನ್ ಚಿನ್ನ ಆಮದು ಮಾಡಿಕೊಂಡಿದ್ದರೆ ಈ ವರ್ಷ 268.10 ಟನ್‍ಗೆ ಏರಿಕೆ ಕಂಡಿದೆ ಎಂದು ವಿಶ್ವ ಚಿನ್ನದ ಪರಿಷತ್ತು (ಡಬ್ಲ್ಯುಜಿಸಿ) ವರದಿ ಹೇಳಿದೆ. ಹಣಕಾಸು ಮೌಲ್ಯದ ಲೆಕ್ಕಾಚಾರದಲ್ಲಿ ಬೇಡಿಕೆ ಶೇ.5.8ರಷ್ಟು ಏರಿಕೆ ಕಂಡಿದ್ದು, ರು.62,939 ಕೋಟಿಗೆ ತಲುಪಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಈ ಮೌಲ್ಯ ರು.59,480 ಕೋಟಿ ಇತ್ತು ಎಂದು ಡಬ್ಲ್ಯುಜಿಸಿ ವಿವರಿಸಿದೆ. ಹಬ್ಬ ಮತ್ತು ಮದುವೆ ಸೀಸನ್ ಗೆ ಹೆಚ್ಚಿನ ಖರೀದಿಯಾಗಿದ್ದರಿಂದ ಬೇಡಿಕೆ ಹೆಚ್ಚಿದೆ ಎಂದು ಡಬ್ಲ್ಯುಜಿಸಿ ಹೇಳಿದೆ.