ಸೆನ್ಸೆಕ್ಸ್ ನಲ್ಲಿ ದಾಖಲೆ ಗಳಿಕೆ

ಭಾರತೀಯ ಷೇರುಮಾರುಕಟ್ಟೆ ಸೋಮವಾರ 565 ಅಂಕಗಳ ಏರಿಕೆಯೊಂದಿಗೆ ದಾಖಲೆ ಏರಿಕೆ ಕಂಡಿದೆ...
ಬಿಎಸ್ ಇ ಸೆನ್ಸೆಕ್ಸ್ (ಸಂಗ್ರಹ ಚಿತ್ರ)
ಬಿಎಸ್ ಇ ಸೆನ್ಸೆಕ್ಸ್ (ಸಂಗ್ರಹ ಚಿತ್ರ)

ಮುಂಬೈ: ಭಾರತೀಯ ಷೇರುಮಾರುಕಟ್ಟೆ ಸೋಮವಾರ 565 ಅಂಕಗಳ ಏರಿಕೆಯೊಂದಿಗೆ ದಾಖಲೆ ಏರಿಕೆ ಕಂಡಿದೆ.

ಸತತ ನಾಲ್ಕನೇ ದಿನವೂ ಮುಂಬೈ ಷೇರುಮಾರುಕಟ್ಟೆ ಏರಿಕೆ ದಾಖಲಿಸಿದ್ದು, ಸೋಮವಾರ ಸೆನ್ಸೆಕ್ಸ್ ನಲ್ಲಿ ಬರೊಬ್ಬರಿ 565 ಅಂಕಗಳ ಏರಿಕೆಯಾಗಿದ್ದು, ಇದು ಪ್ರಸಕ್ತ ಸಾಲಿನ ಎರಡನೇ  ಅತಿದೊಡ್ಡ ಏರಿಕೆಯಾಗಿದೆ. 565 ಅಂಕಗಳ ಏರಿಕೆಯೊಂದಿಗೆ ಸೆನ್ಸೆಕ್ಸ್ 26,785 ಅಂಕಗಳಿಗೇರಿದ್ದು, ಒಟ್ಟಾರೆ ಶೇ.2ರಷ್ಟು ಗಳಿಕೆ ಕಂಡಿದೆ. ನಿಫ್ಟಿಯಲ್ಲಿಯೂ ಕೂಡ 168 ಅಂಕಗಳ ಏರಿಕೆಯಾಗಿದ್ದು,  ಒಟ್ಟಾರೆಯಾಗಿ ನಿಫ್ಟಿ 8,119 ಅಂಕಗಳಿಗೇರಿದೆ.

ರುಪಾಯಿ ಮೌಲ್ಯ ಏರಿಕೆ
ಇದೇ ವೇಳೆ ಮುಂಬೈ ಷೇರುಮಾರುಕಟ್ಟೆಯ ದಾಖಲೆ ಏರಿಕೆ ರುಪಾಯಿ ಮೌಲ್ಯದ ಮೇಲೂ ಪರಿಣಾಮ ಬೀರಿದ್ದು, ಡಾಲರ್ ಎದುರು ರುಪಾಯಿ ಮೌಲ್ಯ 65.28ಕ್ಕೆ ಏರಿಕೆಯಾಗಿದೆ. ಅಮೆರಿಕ  ಫೆಡರಲ್ ಬ್ಯಾಂಕುಗಳು ತಮ್ಮ ಬಡ್ಡಿದರ ಏರಿಕೆ ಕ್ರಮವನ್ನು ಮುಂದಿನ ವರ್ಷಕ್ಕೆ ಮುಂದೂಡಿದ್ದರಿಂದ ಭಾರತೀಯ ಷೇರುಮಾರುಕಟ್ಟೆಯ ಚೇತರಿಕೆಗೆ ನೆರವಾಗಿದೆ ಎಂದು ಆರ್ಥಿಕ ತಜ್ಞರು  ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com