ಅಂತರ್ಜಾಲದಲ್ಲಿ ಒಂದು ರೂಪಾಯಿ ಮುಖಬೆಲೆ ನೋಟು 100 ರೂಪಾಯಿಗೆ ಮಾರಾಟ!

ಆರ್ ಬಿ ಐ ನ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಮುದ್ರಿಸಿರುವ ಒಂದು ರೂಪಾಯಿ ನೋಟನ್ನು ಇ-ಬೇ ಸೇರಿದಂತೆ ಅಂತರ್ಜಾಲ ವಾಣಿಜ್ಯ ಸಂಸ್ಥೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ.
ಒಂದು ರೂಪಾಯಿ ನೋಟು
ಒಂದು ರೂಪಾಯಿ ನೋಟು

ನವದೆಹಲಿ: ಆರ್ ಬಿ ಐ ನ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಮುದ್ರಿಸಿರುವ ಒಂದು ರೂಪಾಯಿ ನೋಟನ್ನು ಇ-ಬೇ ಸೇರಿದಂತೆ ಅಂತರ್ಜಾಲ ವಾಣಿಜ್ಯ ಸಂಸ್ಥೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ.
ಒಂದು ರೂಪಾಯಿ ನೋಟನ್ನು 49 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಕೊರಿಯರ್ ಶುಲ್ಕ ಸೇರಿ ಒಂದು ರೂಪಾಯಿ ಮುಖಬೆಲೆ ನೋಟನ್ನು ಖರೀದಿಸಲು ಬರೋಬ್ಬರಿ 100 ರೂಪಾಯಿ ಖರ್ಚಾಗುತ್ತದೆ. 1 ,200 ರೂಪಾಯಿಗೆ ಒಂದು ರೂಪಾಯಿ ಮುಖಬೆಲೆಯ 100 ನೋಟುಗಳನ್ನು ಮಾರಾಟ ಮಾಡಲಾಗುತ್ತಿದೆ.  
ಅಂತಾರ್ಜಾಲ ವಾಣಿಜ್ಯ ಸಂಸ್ಥೆಗಳಲ್ಲಿ ಒಂದು ರೂಪಾಯಿ ನೋಟಿಗೆ 100 ರೂಪಾಯಿ ಬೆಲೆಯಾದರೆ, ಮುದ್ರಣಕ್ಕೆ ಮಾತ್ರ 1 .14 ರೂಪಾಯಿ ಖರ್ಚಾಗುತ್ತದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಒಂದು ರೂಪಾಯಿ ನೋಟನ್ನು ಮುದ್ರಿಸಲು ಆದೇಶ ಹೊರಡಿಸಿತ್ತು. ಕಳೆದ 20 ವರ್ಷಗಳ ಹಿಂದೆ ಒಂದು ರೂಪಾಯಿ ನೋಟಿನ ಮುದ್ರಣವನ್ನು ನಿಲ್ಲಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com