ಕಪ್ಪು ಹಣ ವರ್ಗಾಯಿಸಿದ ಬ್ಯಾಂಕ್ ಆಫ್ ಬರೋಡ: ಸಿಬಿಐನಿಂದ ತಪಾಸಣೆ

ಕಪ್ಪು ಹಣವನ್ನು ವಿದೇಶಗಳಿಗೆ ವರ್ಗಾಯಿಸಿದ್ದಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಶನಿವಾರ ಇಲ್ಲಿನ ಬ್ಯಾಂಕ್ ಆಫ್ ಬರೋಡಾ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಕಪ್ಪು ಹಣವನ್ನು ವಿದೇಶಗಳಿಗೆ ವರ್ಗಾಯಿಸಿದ್ದಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಶನಿವಾರ ಇಲ್ಲಿನ ಬ್ಯಾಂಕ್ ಆಫ್ ಬರೋಡಾ ಶಾಖೆಗಳ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ. 
ಬ್ಯಾಂಕ್ ಆಫ್ ಬರೋಡಾ ದೆಹಲಿಯಲ್ಲಿನ ಶಾಖೆಗಳ ಮೂಲಕ ರು.6,100 ಕೋಟಿ ಕಪ್ಪು ಹಣವನ್ನು ಹಾಂಕಾಂಗ್‍ಗೆ ವರ್ಗಾಯಿಸಿ ದೆ ಎಂದು ಆರೋಪಿಸಲಾಗಿದೆ. ಬ್ಯಾಂಕ್ ಅಧಿಕಾರಿಗಳು ಕಂಪನಿಗಳ ಮಾಲೀಕರೊಂದಿಗೆ ಕೈಜೋಡಿಸಿ ಇಂತರ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. 
ಅಕ್ರಮ ವಹಿವಾಟು ನಡೆದಿರುವು ದು ಬ್ಯಾಂಕ್‍ನ ಆಡಿಟ್ ವರದಿಗಳಲ್ಲಿ ಕಂಡು ಬಂದಿದೆ ಎಂದು ಸಿಬಿಐ ಮೂಲಗಳು ಹೇಳಿವೆ. ಇಲ್ಲಿನ ಅಶೋಕ್ ವಿಹಾರ್ ಶಾಖೆಯಲ್ಲಿ ತೆರೆದಿರುವ 60 ಕಂಪನಿ ಗಳ ಖಾತೆಗಳಿಂದ ಈ ವಹಿವಾಟು ನಡೆಸಿದ್ದು, ಈ ಕುರಿತು ತಪಾಸಣೆ ನಡೆಯುತ್ತಿದೆ. ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿ ಬ್ಯಾಂಕ್ ದಾಖಲೆ ಪರಿಶೀಲಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com