ಭಾರತದ ವಿದೇಶಿ ವಿನಿಮಯ ಮೀಸಲು 353.06 ಬಿಲಿಯನ್ $ ಗೆ ಏರಿಕೆ

ವಿದೇಶಿ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯ ಕುಸಿದ ಪರಿಣಾಮ ಭಾರತದ ವಿದೇಶಿ ವಿನಿಮಯ ಮೀಸಲು 2 .26 ಬಿಲಿಯನ್ ನಷ್ಟು ಏರಿಕೆಯಾಗಿದೆ.
ವಿದೇಶಿ ವಿನಿಮಯ ಮೀಸಲು(ಸಾಂಕೇತಿಕ ಚಿತ್ರ)
ವಿದೇಶಿ ವಿನಿಮಯ ಮೀಸಲು(ಸಾಂಕೇತಿಕ ಚಿತ್ರ)

ಮುಂಬೈ: ವಿದೇಶಿ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯ ಕುಸಿದ ಪರಿಣಾಮ ಭಾರತದ ವಿದೇಶಿ ವಿನಿಮಯ ಮೀಸಲು 2 .26 ಬಿಲಿಯನ್ ನಷ್ಟು ಏರಿಕೆಯಾಗಿದೆ.
ಅಕ್ಟೋಬರ್ 9 ರ ವರೆಗೆ ಒಟ್ಟಾರೆ ಭಾರತದ ವಿದೇಶಿ ವಿನಿಮಯ ಮೀಸಲು 353.06 ಬಿಲಿಯನ್ ಡಾಲರ್ ನಷ್ಟಾಗಿದೆ ಎಂದು ಆರ್.ಬಿ.ಐ ಬಿಡುಗಡೆ ಮಾಡಿರುವ ಅಧಿಕೃತ ಅಂಕಿ-ಅಂಶಗಳ ಮೂಲಕ ತಿಳಿದುಬಂದಿದೆ. 
ಡಾಲರ್ ಎದುರು ರುಪಾಯಿ ಮೌಲ್ಯ ಏರಿಕೆಯಾಗಿರುವುದು ಸಹ ವಿದೇಶಿ ವಿನಿಮಯ ಮೀಸಲು ಏರಿಕೆಯಾಗಲು ಕಾರಣವಾಗಿದೆ. ಇದರೊಂದಿಗೆ ಜಾಗತಿಕವಾಗಿ ಡಾಲರ್ ಮೌಲ್ಯ ಕುಸಿತ ಕಂಡಿರುವುದರ ಪರಿಣಾಮವೂ ಸಹ ವಿದೇಶಿ ವಿನಿಮಯ ಮೀಸಲು ಏರಿಕೆಯಾಗಲು ಸಹಕಾರಿಯಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ರೂಪಾಯಿ ಮೌಲ್ಯ ಚೇತರಿಕೆಯಾಗಿರುವುದರಿಂದ ಅತಿ ಹೆಚ್ಚು ಡಾಲರ್ ಗಳನ್ನು ಖರೀದಿ ಮಾಡಲು ಆರ್.ಬಿ.ಐ ಗೆ ಸಾಧ್ಯವಾಗಿದ್ದು ರುಪಾಯಿಯನ್ನು ಸುಸ್ಥಿತಿಯಲ್ಲಿರಲು ಕಾರಣವಾಗಿದೆ. ಸೆಪ್ಟೆಂಬರ್ ನಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು 631 .5 ಮಿಲಿಯನ್ ಡಾಲರ್ ನಿಂದ 352 .02 ಬಿಲಿಯನ್ ಡಾಲರ್ ಗೆ ಏರಿಕೆಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com