ಐಷಾರಾಮಿ ಜಿಎಲ್‍ಇ ಬಿಡುಗಡೆ ಮಾಡಿದ ಬೆಂಜ್

ಜರ್ಮನಿಯ ಮರ್ಸಿಡೆಸ್ ಬೆಂಜ್ ನೂತನ ಐಷಾರಾಮಿ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‍ಯುವಿ) `ಜಿಎಲ್‍ಇ-ಕ್ಲಾಸ್' ಕಾರನ್ನು ನವದೆಹಲಿಯಲ್ಲಿ ಬಿಡುಗಡೆಗೊಳಿಸಿತು.ನೂತನ ಮಾದರಿ ಬಿಡುಗಡೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ;  ಐಷಾರಾಮಿ ಕಾರುಗಳು ತಯಾರಕ ಕಂಪನಿ ಜರ್ಮನಿಯ ಮರ್ಸಿಡೆಸ್ ಬೆಂಜ್ ನೂತನ ಐಷಾರಾಮಿ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‍ಯುವಿ) `ಜಿಎಲ್‍ಇ-ಕ್ಲಾಸ್' ಕಾರನ್ನು ನವದೆಹಲಿಯಲ್ಲಿ ಬಿಡುಗಡೆಗೊಳಿಸಿತು.ನೂತನ ಮಾದರಿ ಬಿಡುಗಡೆ ಮಾಡಿ ಮಾತನಾಡಿದ ಕಂಪನಿ ಭಾರತೀಯ ವಿಭಾಗದ ಎಂಡಿ ರೋಲ್ಯಾಂಡ್ ಎಸ್ ಫೋಲ್ಜರ್, ಭಾರತದಲ್ಲಿ ಐಷಾರಾಮಿ ಕಾರುಗಳ ಬಳಕೆ ಏರಿಕೆ ಕಾಣುತ್ತಿದೆ. ಖರೀದಿದಾರರು ಗುಣಮಟ್ಟವನ್ನು ಗಮನದಲ್ಲಿಟ್ಟುಕೊಳ್ಳುತ್ತಾರೆ. ಹೀಗಾಗಿಯೇ
ಭಾರತದಲ್ಲಿ ಮಾರಾಟವಾಗುವ ಐಷಾರಾಮಿ ಕಾರುಗಳ ಪೈಕಿ ಮರ್ಸಿಡೆಸ್ ಬೆಂಜ್ ಪಾಲು ಶೇ.16ಕ್ಕಿಂತಲೂ ಹೆಚ್ಚಿದೆ ಎಂದರು. 1997ರಲ್ಲಿ ವಿಶ್ವದಾದ್ಯಂತ ಎಂ ಕ್ಲಾಸ್‍ನ ಕಾರುಗಳನ್ನು ಬಿಡುಗಡೆ ಮಾಡಿದ್ದು, ಇದುವರೆಗಿನ ಅತ್ಯಂತ ಯಶಸ್ವಿ ಮಾಡಲ್ ಗಳಾಗಿ ಮುಂಚೂಣಿಯಲ್ಲಿವೆ. ಇದುವರೆಗೂ 16 ಲಕ್ಷ ಕಾರುಗಳ ಮಾರಾಟವಾಗಿವೆ. 2015ರ ಸಾಲಿನಲ್ಲಿ ಒಟ್ಟು 13 ಹೊಸ ಮಾದರಿಗಳನ್ನು ಬಿಡುಗಡೆ ಮಾಡಿದ್ದು ಮುಂದಿನ ದಿನಗಳಲ್ಲಿ ಇನ್ನೆರೆಡು ಸೇರಿ ಒಟ್ಟು 15 ಹೊಸ ಮಾದರಿ ಬಿಡುಗಡೆ ಮಾಡಲಾಗುವುದು. ಜಿಎಲ್‍ಇ, ಮರ್ಸಿಡೆಸ್-ಮೇಬ್ಯಾಚ್, ಸಿಎಲ್‍ಎ, ಸಿ220 ಸಿಡಿಐ ಮತ್ತು ನೂತನ ಬಿ ಸರಣಿ ಕಾರುಗಳು ಇದರಲ್ಲಿ ಸೇರಿವೆ.

ಉನ್ನತೀಕರಿಸಿದ ಶ್ರೇಣಿಗಳ ಸಾರಿಗೆ ಜಿಎಲ್‍ಇ ಎಂ ಕ್ಲಾಸ್ ಸೇರಿದೆ. ಎಂ ಕ್ಲಾಸ್‍ನ ಎಸ್‍ಯುವಿಗಳು ಈಗಾಗಲೇ ಭಾರತ ಸೇರಿದಂತೆ ವಿಶ್ವಾದ್ಯಂತ ಜನಪ್ರಿಯತೆ ಗಳಿಸಿವೆ ಎಂದು ರೋಲ್ಯಾಂಡ್ ತಿಳಿಸಿದರು. ಭಾರತದಲ್ಲಿ ಇತ್ತೀಚೆಗೆ ಬಿಡುಗಡೆಯಾಗಿರುವ ಬಿಎಂಡಬ್ಲ್ಯೂ ಎಕ್ಸ್5, ವೋಲ್ವೋ ಎಸ್‍ಸಿ90 ಹಾಗೂ ಆಡಿ ಕ್ಯೂ7 ಸರಣಿಗೆ ಜಿಎಲ್‍ಇ ತೀವ್ರ ಸ್ಪರ್ಧೆ ಒಡ್ಡುವ ನಿರೀಕ್ಷೆ ಇದೆ. ಜಿಎಲ್‍ಇ ಕ್ಲಾಸ್
ಕಾರು ಎರಡು ಮಾದರಿಯಲ್ಲಿ ಲಭ್ಯವಿದ್ದು 250ಡಿ 2143 ಸಿಸಿ ಡೀಸಲ್ ಎಂಜಿನ್‍ನ ಬೆಲೆ ರೂ. 58.90 ಲಕ್ಷ ಹಾಗೂ 350ಡಿ 2,987 ಡೀಸೆಲ್ ಎಂಜಿನ್ ಕಾರಿನ ಬೆಲೆ <69.90 ಲಕ್ಷ (ದೆಹಲಿ ಎಕ್ಸ್ ಶೋಮ್ ಬೆಲೆ) ಆಗಿರಲಿದೆ. ಕಾರುಗಳ ಬುಕಿಂಗ್ ಈಗಾಗಲೇ ಆರಂಭವಾಗಿದೆ.
ಜಿಎಲ್‍ಇ ಮಾದರಿ ಕಾರು-ಗಳನ್ನು ಪುಣೆಯಲ್ಲಿರುವ ಕಂಪನಿ ಘಟಕದಲ್ಲಿ ತಯಾರಿಸಲಾಗುತ್ತದೆ ಎಂದು ತಿಳಿಸಿದರು.

2015ರ ಜನವರಿಯಿಂದ ಸೆಪ್ಟಂಬರ್ ಅವಧಿಯಲ್ಲಿ ಮರ್ಸಿಡೆಸ್ ಕಂಪನಿಯ ಕಾರುಗಳ ಮಾರಾಟದಲ್ಲಿ ಶೇ.34ರಷ್ಟು ಏರಿಕೆ ಕಂಡಿದ್ದು ಒಟ್ಟು 10,079 ಕಾರು ಮಾರಾಟವಾಗಿವೆ ಎಂದು ಕಂಪನಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com