ಎಲ್ಲ ಕಾಲಕ್ಕೂ ಸಹಾಯಕ್ಕೆ ಬರಲಿದೆ ಭವಿಷ್ಯ ನಿಧಿ ಉಳಿತಾಯ

ಕಾರ್ಮಿಕರ ನಿವೃತ್ತಿ ಕಾಲದಲ್ಲಿ ನೆರವಿಗೆ ಬರುವುದೇ ಭವಿಷ್ಯನಿಧಿ. ಆದರೆ ಕೆಲವೊಮ್ಮೆ ಮಧ್ಯದಲ್ಲಿಯೇ ಹಣಕಾಸಿನ ತುರ್ತು ಅಗತ್ಯಗಳು ಎದುರಾಗದೆ ಇರದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನಿಮಗೆ ಪ್ಲಾಟ್ ಖರೀದಿಸುವ ಉದ್ದೇಶವಿದೆಯೇ, ಇರುವ ಮನೆ ದುರಸ್ತಿ ಅಥವಾ ನವೀಕರಣ ಮಾಡಿಸುವ ಚಿಂತನೆ ಹೊಂದಿದ್ದೀರಾ. ಇಲ್ಲವೇ ಹೆಚ್ಚುವರಿ ಕೊಠಡಿ ನಿರ್ಮಿಸಲು ಮುಂದಾಗಿದ್ದು ಹಣದ ಸಮಸ್ಯೆ ಎದುರಿಸುತ್ತಿದ್ದೀರಾ. ಎಲ್ಲೂ ಹಣ ಸಿಗದಿರುವ ಇಂತಹ ಕಷ್ಟಕಾಲದಲ್ಲಿ ನಿಮ್ಮ ಹೆಸರಲ್ಲಿ ಪಿಎಫ್ ಇದ್ದರೆ ಖಂಡಿತ ನೆರವಿಗೆ ಬರುತ್ತೆ.

ಕಾರ್ಮಿಕರ ನಿವೃತ್ತಿ ಕಾಲದಲ್ಲಿ ನೆರವಿಗೆ ಬರುವುದೇ ಭವಿಷ್ಯನಿಧಿ. ಆದರೆ ಕೆಲವೊಮ್ಮೆ ಮಧ್ಯದಲ್ಲಿಯೇ ಹಣಕಾಸಿನ ತುರ್ತು ಅಗತ್ಯಗಳು ಎದುರಾಗದೆ ಇರದು. ಅಂತಹ ಸಂದರ್ಭದಲ್ಲಿ ಎಚ್ಚರಿಕೆಯಿಂದ ಈ ಹಣವನ್ನು ಬಳಸಿಕೊಳ್ಳಬಹುದು. ಆದರೆ ಯಾವುದೇ ಕಾರಣಕ್ಕೂ ವ್ಯರ್ಥ ಆಗಬಾರದು. ಏಕೆಂದರೆ ಈ ಭವಿಷ್ಯ ನಿಧಿಮೇಲೆ ನಿಮ್ಮ ಸಂಧ್ಯಾಕಾಲದ ಬದುಕು ನಿಂತಿರುತ್ತದೆ.

ಸಾಮಾನ್ಯವಾಗಿ ಎಲ್ಲ ಕಾರ್ಮಿಕರ ಹೆಸರಲ್ಲೂ ಭವಿಷ್ಯನಿದಿ (ಪಿಎಫ್) ಇರುತ್ತೆ. ಇದನ್ನು ಕೆಲಸದಿಂದ ನಿವೃತ್ತಿಯಾದಾಗ ಮಾತ್ರ ಪಡೆದುಕೊಳ್ಳಬೇಕೆಂದೇನೂ ಇಲ್ಲ. ಮಧ್ಯದಲ್ಲಿಯೂ ನಿಮಗೆ ಹಣದ ಅಗತ್ಯತೆ ಬಂದಾಗ ಉಪಯೋಗಿಸಿಕೊಳ್ಳಬಹುದು. ಪಿಎಫ್ ಅನ್ನು
ಯಾವುದೇ ಸಾಲಕ್ಕೆ ಶ್ಯೂರಿಟಿ ನೀಡಲು ಆಗುವುದಿಲ್ಲ. ಆದರೆ ಪ್ಲಾಟ್, ಮನೆ ಸಾಲ ಪಾವತಿಗೆ, ಮನೆ ದುರಸ್ತಿ, ನವೀಕರಣಕ್ಕೆ, ನಿರ್ಮಾಣಕ್ಕೆ ಪಿಎಫ್ ಸಂಸ್ಥೆಯಿಂದ ಸಾಲ ಪಡೆಯಬಹುದು.

ಪಿಎಫ್ ಪಡೆಯಲು ನಿಯಮ: ಪಿಎಫ್ ಮೇಲೆ ಸಾಲ ಪಡೆಯಲು ಹಲವು ನಿಯಮಗಳಿವೆ. ವ್ಯಕ್ತಿಯೊಬ್ಬರು ಕನಿಷ್ಠ ಐದು ವರ್ಷ ಪಿಎಫ್ ಸಂದಾಯ ಮಾಡಿರಬೇಕು. ನೀವು ಖರೀದಿಸಲು ಅಥವಾ ನವೀಕರಣ ಮಾಡಲು ಉದ್ದೇಶಿಸಿರುವ ಸ್ವತ್ತು ನಿಮ್ಮ ಅಥವಾ ನಿಮ್ಮ ಪತ್ನಿ ಹೆಸರಲ್ಲಿ ಇರಬೇಕು. ಅಥವಾ ಇಬ್ಬರ ಹೆಸರಲ್ಲೂ ಜಂಟಿಯಾಗಿ ಇರಬಹುದು. ಇದಕ್ಕೆ ಸಂಬಂ„ಸಿದ ಎಲ್ಲ ದಾಖಲೆಗಳನ್ನು ಒದಗಿಸಬೇಕು.

ಎಚ್ಚರಿಕೆ ಇರಲಿ: ಬಹಳಷ್ಟು ಅನುಭವಿಗಳು ಮತ್ತು ಹಣಕಾಸು ತಜ್ಞರ ಸಲಹೆ ಏನೆಂದರೆ ಯಾವುದೇ ವ್ಯಕ್ತಿ ತನ್ನ ವಾಸಕ್ಕೆ ಮನೆ
ಮಾಡುವಂತಿದ್ದರೆ ಮಾತ್ರ ಪಿಎಎಫ್ ಹಣವನ್ನು ಬಳಕೆ ಮಾಡಿಕೊಳ್ಳುವುದು ಒಳಿತು. ಹೂಡಿಕೆ ಉದ್ದೇಶಕ್ಕೆ ಸ್ವತ್ತು ಖರೀದಿ ಮಾಡಬಾರದು
ಎಂಬುದು. ಪಿಎಫ್ ಹಣ ನಿವೃತ್ತಿ ಕಾಲಕ್ಕಿರುವುದರಿಂದ ಅದನ್ನು ರಕ್ಷಿಸಿಕೊಳ್ಳಬೇಕು. ಒಂದು ವೇಳೆ ನೀವು ಖರೀದಿಸಿದ ಆಸ್ತಿ ನಿಗದಿತ ಅವಧಿಯಲ್ಲಿ ಆದಾಯ ತಂದುಕೊಡಲಿದ್ದು ಪಿಎಫ್ ಹಣ ಹಿಂದಿರುಗಿಸುವ ನಂಬಿಕೆ ಇದ್ದರೆ ಮಾತ್ರ ಪಡೆಯುವುದು ಒಳಿತು.
ಎಷ್ಟು ಸಾಲ ಸಿಗಲಿದೆ ಈಗಿನ ನಿಯಮಗಳಂತೆ ಪಿಎಫ್ ಖಾತೆದಾರ ತನ್ನ ಮೂಲ ವೇತನದ 36 ಪಟ್ಟು ಸಾಲ ಪಡೆಯಬಹುದು. ಸರ್ಕಾರಿ
ನೌಕರರಾದರೆ ದಿನಭತ್ಯೆ ಮೂಲ ವೇತನದೊಂದಿಗೆ ಸೇರಿರುತ್ತೆ. ಸಾಲ ಪಡೆಯಲು ಘೋಷಣಾ ಪತ್ರವನ್ನು ತುಂಬಿಸಬೇಕು. ಖರೀದಿಸಿರುವ ಪ್ಲಾಟ್‍ನ ಕ್ರಯಪತ್ರದ ಪ್ರತಿ  1ಸರ್ಕಾರಿ ನೌಕರರಿಗೆ ಪ್ಲಾಟ್ ಖರೀದಿಗೆ ವೇತನದ 24 ಪಟ್ಟು ಸಾಲ ಸಿಗಲಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com