ತೆಲಂಗಾಣದಲ್ಲಿ ಫ್ಲಿಪ್ ಕಾರ್ಟ್ ಬೃಹತ್ ವೇರ್‍ಹೌಸ್ ಆರಂಭ

ದೇಶದ ಅತಿದೊಡ್ಡ ಆನ್ ಲೈನ್ ವಹಿವಾಟು ಕಂಪನಿ ಫ್ಲಿಪ್ ಕಾರ್ಟ್ ತೆಲಂಗಾಣದಲ್ಲಿ ಕಂಪನಿಯ ಅತಿ ದೊಡ್ಡ ವೇರ್‍ಹೌಸ್ ಆರಂಭಿಸಿದೆ. ಇದರೊಂದಿಗೆ ದೇಶದಲ್ಲಿ ಕಂಪನಿಯ ಒಟ್ಟಾರೆ ವೇರ್ ಹೌಸ್ ಗಳ ಸಂಖ್ಯೆ 17 ಕ್ಕೆ ತಲುಪಿದೆ...
ಫ್ಲಿಪ್ ಕಾರ್ಟ್ (ಸಂಗ್ರಹ ಚಿತ್ರ)
ಫ್ಲಿಪ್ ಕಾರ್ಟ್ (ಸಂಗ್ರಹ ಚಿತ್ರ)

ಹೈದರಾಬಾದ್: ದೇಶದ ಅತಿದೊಡ್ಡ ಆನ್ ಲೈನ್ ವಹಿವಾಟು ಕಂಪನಿ ಫ್ಲಿಪ್ ಕಾರ್ಟ್ ತೆಲಂಗಾಣದಲ್ಲಿ ಕಂಪನಿಯ ಅತಿ ದೊಡ್ಡ ವೇರ್‍ಹೌಸ್ ಆರಂಭಿಸಿದೆ. ಇದರೊಂದಿಗೆ ದೇಶದಲ್ಲಿ ಕಂಪನಿಯ ಒಟ್ಟಾರೆ ವೇರ್ ಹೌಸ್ ಗಳ ಸಂಖ್ಯೆ 17 ಕ್ಕೆ ತಲುಪಿದೆ.

ರಂಗಾರೆಡ್ಡಿ ಜಿಲ್ಲೆ ಸನಿಹದಲ್ಲಿರುವ ಮೆಡ್ ಚಲ್ ಮಂಡಲ್ ನ ಗುಂಡ್ಲ ಪೋಚಂಪಲ್ಲಿಯಲ್ಲಿ ಈ ವೇರ್ ಹೌಸ್ ನಿರ್ಮಾಣ ಮಾಡಿದ್ದು 2.2 ಲಕ್ಷ ಚದರ ಮೀಟರ್ ವಿಸ್ತೀರ್ಣ ಇದೆ. 5.89 ಲಕ್ಷ ಕ್ಯೂಬಿಕ್ ಅಡಿ ಸಂಗ್ರಹ ಸಾಮರ್ಥ್ಯ ಹೊಂದಿದೆ.

ತೆಲಂಗಾಣದಲ್ಲಿ ಕಂಪನಿಯ ಅತಿದೊಡ್ಡ ವೇರ್ ಹೌಸ್ ಆರಂಭಿಸಿದ್ದಕ್ಕೆ ನಾವು ಸಂತೋಷಗೊಂಡಿದ್ದೇವೆ. ತೆಲಂಗಾಣ ಸರ್ಕಾರ ಇ-ಕಾಮರ್ಸ್ ಕಂಪನಿಗಳಿಗೆ ಉತ್ತಮ ಪರಿಸರ ಒದಗಿಸುತ್ತಿದೆ. ಈ ಘಟಕ ಸ್ಥಾಪಿಸಲು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದು ಕಂಪನಿ ಸಹ ಸಂಸ್ಥಾಪಕ ಬಿನ್ನಿ ಬನ್ಸಾಲ್ ಹೇಳಿದ್ದಾರೆ. ಇಲ್ಲಿ 17 ಸಾವಿರ ಉದ್ಯೋಗ ಸೃಷ್ಠಿಯಾಗುತ್ತೆ.

ಫ್ಲಿಪ್ ಕಾರ್ಟ್ ಸನಿಹಕ್ಕೆ ಅಮೆಜಾನ್
ದೇಶದ ಅತಿದೊಡ್ಡ ಆನ್ ಲೈನ್ ವಹಿವಾಯು ಸಂಸ್ಥೆ ಫ್ಲಿಪ್ ಕಾರ್ಟ್ ಸನಿಹಕ್ಕೆ ಪ್ರತಿಸ್ಪರ್ಥಿ ಕಂಪನಿ ಅಮೆಜಾನ್ ದಾಪುಗಾಲಿಟ್ಟಿದೆ. ಕಳೆದ ಜುಲೈ 29ರಿಂದ ಅಕ್ಟೋಬರ್ 26 ರವರೆಗೆ 90 ಲಕ್ಷ ಮಂದಿ ಫ್ಲಿಪ್ ಕಾರ್ಟ್ ಆ್ಯಪ್ ಡೌನ್ ಲೋಡ್ ಮಾಡಿಕೊಂಡಿದ್ದರೆ ಅಮೆಜಾನ್ ಆ್ಯಪ್ 81 ಲಕ್ಷ ಡೌನ್ ಲೋಡ್ ಅಗಿದೆ ಎಂದು ಆ್ಯಪ್ ಗಳ ಕುರಿತ ವಿಶ್ಲೇಷಣಾ ಸಂಸ್ಥೆ ಆ್ಯಪ್ ಅನಿ ಹೇಳಿದೆ. ಅಕ್ಟೋಬರ್ ತಿಂಗಳಿನ 28 ದಿನಗಳಲ್ಲಿ ಅಮೆಜಾನ್ ಗೆ ಅತಿ ಹೆಚ್ಚು ಗ್ರಾಹಕರು ಭೇಟಿ ನೀಡಿದ್ದಾರೆ. ಫ್ಲಿಪ್ ಕಾರ್ಟ್ ಗೆ ಬಂದ ಕರೆಗಳು ಶೇ.35ರಿಂದ 38 ಕ್ಕೆ ಏರಿದ್ದರೆ ಅಮೆಜಾನ್ ಶೇ.11 ರಿಂದ 19ಕ್ಕೆ ಹೆಚ್ಚಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com