ಭಾರತ-ಪಾಕ್ ನಡುವೆ 1965ರಲ್ಲಿ ನಡೆದ ಯುದ್ಧದ ಸ್ಮರಣಾರ್ಥ ನಾಣ್ಯ

ಭಾರತ-ಪಾಕ್ ನಡುವೆ 1965ರಲ್ಲಿ ನಡೆದ ಯುದ್ಧದ ಸ್ಮರಣಾರ್ಥ ಭಾರತೀಯ ರಿಸರ್ವ್ ಬ್ಯಾಂಕ್ ರು.5 ನಾಣ್ಯ ಬಿಡುಗಡೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಭಾರತ-ಪಾಕ್ ನಡುವೆ 1965ರಲ್ಲಿ ನಡೆದ ಯುದ್ಧದ ಸ್ಮರಣಾರ್ಥ ಭಾರತೀಯ ರಿಸರ್ವ್ ಬ್ಯಾಂಕ್ ರು.5 ನಾಣ್ಯ ಬಿಡುಗಡೆ ಮಾಡಲಿದೆ.

ಹೊಸ ನಾಣ್ಯದ ಜೊತೆಗೆ ಈಗಿರುವ ನಾಣ್ಯಗಳೂ ಚಲಾವಣೆಯಲ್ಲಿ ಇರಲಿವೆ ಎಂದು ಆರ್ ಬಿಐ ಗುರುವಾರ ಹೇಳಿದೆ. ನಾಣ್ಯದ ಒಂದು ಬದಿಯಲ್ಲಿ ಅಮರ್‍ಜವಾನ್ ಸ್ಮಾರಕ ಇರಲಿದ್ದು ಹಿಂದಿಯಲ್ಲಿ ವೀರತ ಔರ್ ಬಲಿದಾನ್ ಎಂದು ಬರೆದಿರಲಿದೆ.

ಆಂಗ್ಲಭಾಷೆಯಲ್ಲಿ ವೇಲರ್ ಅಂಡ್ ಸ್ಯಾಕ್ರಿಫ್ರೈಸ್ ಎಂದು ಬರೆದಿರಲಿದೆ ಎಂದು ಆರ್ ಬಿಐ ಹೇಳಿಕೆಯಲ್ಲಿ ವಿವರಿಸಿದೆ. ನಾಣ್ಯದ ಮತ್ತೊಂದು ಬದಿಯಲ್ಲಿ ಇತರ ನಾಣ್ಯಗಳಿಗೆ ಇರುವಂತೆ ಮೂರು ಸಿಂಹಗಳ ತಲೆ ಮತ್ತು ಅಶೋಕ ಚಕ್ರ ಇರುವ ಲಾಂಛನ ಇರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com