ಮತ್ತೆ ಇಳಿಕೆ ಕಂಡ ಷೇರು ಪೇಟೆ

ಸೋಮವಾರ ವಹಿವಾಟು ಆರಂಭಕ್ಕೆ ಮುಂಬೈ ಷೇರು ಮಾರುಕಟ್ಟೆಯ ವ್ಯವಹಾರದಲ್ಲಿ ಸಂವೇದಿ ಸೂಚ್ಯಂಕ 148 ಅಂಕಗಳಷ್ಟು ಏರಿಕೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಸೋಮವಾರ ವಹಿವಾಟು ಆರಂಭಕ್ಕೆ ಮುಂಬೈ ಷೇರು ಮಾರುಕಟ್ಟೆಯ ವ್ಯವಹಾರದಲ್ಲಿ ಸಂವೇದಿ ಸೂಚ್ಯಂಕ 148 ಅಂಕಗಳಷ್ಟು ಏರಿಕೆ ಕಂಡುಬಂದರೂ ಈಗ ಮತ್ತೆ ಕುಸಿತ ಕಾಣುತ್ತಿದೆ. ನಿಫ್ಟಿ 7 ಸಾವಿರದ 700 ದಾಟಿದೆ.

30 ಷೇರುಗಳನ್ನು ಹೊಂದಿರುವ ಮುಂಬೈ ಷೇರು ಮಾರುಕಟ್ಟೆಯ ಸೂಚ್ಯಂಕದಲ್ಲಿ ರಿಯಲ್ ಎಸ್ಟೇಟ್, ಆಟೋ, ಬ್ಯಾಂಕಿಂಗ್, ಐಟಿ ಮತ್ತು ಎಫ್ಎಂಸಿಜಿ ವಲಯಗಳ ಷೇರು ಮಾರಾಟದ ಬೆಳಗಿನ ವಹಿವಾಟಿನಲ್ಲಿ ಚೇತರಿಕೆ ಕಂಡುಬಂದಿದೆ.

ಚೀನಾ ಮಾರುಕಟ್ಟೆಯಲ್ಲಿ ಕೊಂಚ ಚೇತರಿಕೆ ಕಂಡುಬಂದದ್ದು ಮತ್ತು ಮೌಲ್ಯದ ಖರೀದಿ ಇಂದಿನ ಹೆಚ್ಚಳಕ್ಕೆ ಕಾರಣವಾಗಿದೆ. ಏಷ್ಯಾ ಮಾರುಕಟ್ಟೆಯಲ್ಲಿ ಜಪಾನ್ ನ ನಿಕ್ಕಿ ಶೇಕಡಾ 0.55 ಕಷ್ಟು ಏರಿಕೆಯಾಗಿದ್ದು, ಶಾಂಘೈ 0.77, ಹಾಂಕಾಂಗ್ ನ ಹಾಂಗ್ ಸೆಂಗ್ ಸೂಚ್ಯಂಕ 0.13 ಶೇಕಡಾ ಕುಸಿದಿದೆ.

ಇತ್ತೀಚಿನ ವರದಿ ಬಂದಾಗ ಮುಂಬೈ ಷೇರು ಸಂವೇದಿ ಸೂಚ್ಯಂಕ 34 ಅಂಕ ಇಳಿಕೆ ಕಂಡು 25 ಸಾವಿರದ 163ರಲ್ಲಿ ವಹಿವಾಟು ನಡೆಸುತ್ತಿತ್ತು. ನಿಫ್ಟಿ 13 ಅಂಕ ಇಳಿಕೆ ಕಂಡು 7 ಸಾವಿರದ 641ರಲ್ಲಿ ವಹಿವಾಟು ನಡೆಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com