
ಮುಂಬೈ: ಭಾರತದ ವಿದೇಶಿ ವಿನಿಮಯ ಮೀಸಲು 631 .5 ಮಿಲಿಯನ್ ಡಾಲರ್ ನಿಂದ 352 .02 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ.
ಸೆ.11 ರ ವಾರಾಂತ್ಯದಲ್ಲಿ ವಿದೇಶಿ ವಿನಿಮಯ ಮೀಸಲು 2 .35 ಬಿಲಿಯನ್ ಡಾಲರ್ ಏರಿಕೆಯಾಗಿ 351 .38 ಬಿಲಿಯನ್ ಡಾಲರ್ ನಷ್ಟಿತ್ತು. ಇದಕ್ಕೂ ಮುನ್ನ ಸೆಪ್ಟೆಂಬರ್ ನ ಮೊದಲ ವಾರಾಂತ್ಯದಲ್ಲಿ ಮೀಸಲು 2 .88 ಬಿಲಿಯನ್ ಡಾಲರ್ ಇಳಿಕೆಯಾಗಿತ್ತು ಎಂದು ಆರ್.ಬಿ.ಐ ತಿಳಿಸಿದೆ.
ಪರಿಶೀಲನೆಯಲ್ಲಿರುವ ಪ್ರಸಕ್ತ ವಾರದಲ್ಲಿ ಎಫ್.ಸಿ.ಎ 592 .7 ಮಿಲಿಯನ್ ಡಾಲರ್ ನಿಂದ 328 .56 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ ಎಂದು ಆರ್.ಬಿ.ಐ ಹೇಳಿದೆ. ವಿದೇಶಿ ವಿನಿಮಯ ಮೀಸಲು ಏರಿಕೆಗೆ ಎಫ್.ಸಿ.ಎ ಪ್ರಮುಖ ಪಾತ್ರ ವಹಿಸಲಿದ್ದು ಡಾಲರ್ ಮೌಲ್ಯದಲ್ಲಿ ಅಳೆಯಲಾಗುತ್ತದೆ.
Advertisement