ನಾಲ್ಕನೇ ತ್ರೈಮಾಸಿಕ: ಇನ್ಫೋಸಿಸ್ ನ ನಿವ್ವಳ ಲಾಭದಲ್ಲಿ ಶೇ.16.2 ರಷ್ಟು ಏರಿಕೆ

ಇನ್ಫೋಸಿಸ್ ಸಂಸ್ಥೆ ನಾಲ್ಕನೇ ತ್ರೈಮಾಸಿಕ ವಿವರ ಪ್ರಕಟಿಸಿದ್ದು ಕ್ರೋಡೀಕೃತ ನಿವ್ವಳ ಲಾಭದಲ್ಲಿ ಶೇ.16 .2 ರಷ್ಟು ಏರಿಕೆಯಾಗಿದೆ ಎಂದು ವರದಿ ನೀಡಿದೆ.
ಇನ್ಫೋಸಿಸ್
ಇನ್ಫೋಸಿಸ್
Updated on

ಬೆಂಗಳೂರು: ಸಾಫ್ಟ್ ವೇರ್ ಸೇವೆಗಳನ್ನು ಒದಗಿಸುವ ದೇಶದ ಎರಡನೇ ಅತಿ ದೊಡ್ಡ ಸಂಸ್ಥೆ ಇನ್ಫೋಸಿಸ್ ಸಂಸ್ಥೆ ನಾಲ್ಕನೇ ತ್ರೈಮಾಸಿಕ ವಿವರ ಪ್ರಕಟಿಸಿದ್ದು ಕ್ರೋಡೀಕೃತ ನಿವ್ವಳ ಲಾಭದಲ್ಲಿ  ಶೇ.16 .2 ರಷ್ಟು ಏರಿಕೆಯಾಗಿದೆ ಎಂದು ವರದಿ ನೀಡಿದೆ.
2016 ರ ಮಾರ್ಚ್. 31 ಕ್ಕೆ ಮುಕ್ತಾಯಗೊಂಡ ಜನವರಿಯಿಂದ ಮಾರ್ಚ್ ವರೆಗಿನ ನಾಲ್ಕನೇ ತ್ರೈಮಾಸಿಕದಲ್ಲಿ ಸಂಸ್ಥೆಗೆ ಒಟ್ಟಾರೆ 3,597  ಕೋಟಿ ರೂಪಾಯಿಯಷ್ಟು ಲಾಭ ಗಳಿಸಿದೆ, 2014 -15 ರ ನಾಲ್ಕನೇ ತ್ರೈಮಾಸಿಕದಲ್ಲಿ ಇನ್ ಫೋಸಿಸ್ ಸಂಸ್ಥೆ 3,097 ಕೋಟಿ ರುಪಾಯಿಯಷ್ಟು ನಿವ್ವಳ ಲಾಭ ಗಳಿಸಿತ್ತು. 2014 -15 ರ ತ್ರೈಮಾಸಿಕಕ್ಕೆ (ರೂ.13 ,೪೧೧ ಕೋಟಿ ಲಾಭ) ಹೋಲಿಸಿದರೆ ಪ್ರಸಕ್ತ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ ಸಂಸ್ಥೆಯ ಲಾಭ ಶೇ.23 .4 ರಷ್ಟು ( ರೂ. 16 ,550 ಕೋಟಿ) ಗೆ ಏರಿಕೆಯಾಗಿದೆ ಎಂದು ಸಂಸ್ಥೆಯ ವರದಿ ತಿಳಿಸಿದೆ.
2014 -15 ರ ಅಕ್ಟೋಬರ್- ಡಿಸೆಂಬರ್ ವರೆಗಿನ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಆದಾಯ ಶೇ.3.8 ರಷ್ಟು ಏರಿಕೆಯಾಗಿತ್ತು. 2015 -16 ರ ಅಕ್ಟೋಬರ್- ಡಿಸೆಂಬರ್ ವರೆಗಿನ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಆದಾಯ ಶೇ.4 .1 ರಷ್ಟು ಏರಿಕೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com